ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರ್ಟ್‌ ಧರಿಸದೇ ವಿಚಾರಣೆಗೆ ಹಾಜರು: ಸುಪ್ರೀಂ ಕೋರ್ಟ್ ಅಸಮಾಧಾನ

ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ: ಸುಪ್ರೀಂ ಎಚ್ಚರಿಕೆ
Last Updated 1 ಡಿಸೆಂಬರ್ 2020, 9:57 IST
ಅಕ್ಷರ ಗಾತ್ರ

ನವದೆಹಲಿ: ವಿಡಿಯೊ ಕಾನ್ಫರೆನ್ಸ್‌ ಮೂಲಕ ‍ಪ್ರಕರಣವೊಂದರ ವಿಚಾರಣೆ ನಡೆಸುವ ವೇಳೆ ಶರ್ಟ್‌ ಧರಿಸದೇ ಬಂದಿದ್ದ ವ್ಯಕ್ತಿಯನ್ನು ಪರದೆಯ ಮೇಲೆ ನೋಡಿದ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

‘ಏಳೆಂಟು ತಿಂಗಳಿನಿಂದ ಇದೇ ರೀತಿ ವಿಡಿಯೊ ಕಾನ್ಫೆರನ್ಸ್‌ ಮೂಲಕ ವಿಚಾರಣೆ ನಡೆಯುತ್ತಿದ್ದರೂ ಇಂಥ ಸಂಗತಿಗಳು ಮರುಕಳಿಸುತ್ತಿವೆ' ಎಂದು ‌ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಹೇಮಂತ್ ಗುಪ್ತಾ ಅವರನ್ನೊಳಗೊಂಡ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಜತೆಗೆ ‘ಇಂಥದ್ದೆಲ್ಲ ನಡೆಯಬಾರದು‘ ಎಂದೂ ಎಚ್ಚರಿಸಿದೆ.

ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡಸುತ್ತಿರುವಾಗ ಇಂಥ ಅಹಿತಕರ ಘಟನೆಗಳು ನಡೆಯುತ್ತಿರುವುದು ಇದೇನು ಮೊದಲೇನಲ್ಲ. ಅಕ್ಟೋಬರ್ 26ರಂದು, ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ಪೀಠ ವಿಚಾರಣೆ ನಡೆಸುವಾಗ ಇಂಥದ್ದೇ ಘಟನೆ ನಡೆದಿತ್ತು. ಆಗ ವಕೀಲರೊಬ್ಬರು ಶರ್ಟ್‌ ಧರಿಸದೇ ಪಾಲ್ಗೊಂಡಿದ್ದರು.

‘ನಾನು ಯಾರ ಬಗ್ಗೆಯೂ ಕಠಿಣವಾಗಿ ನಡೆದುಕೊಳ್ಳಲು ಇಷ್ಟಪಡುವುದಿಲ್ಲ. ಆದರೆ, ನೀವು ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದರಿಂದ ಎಚ್ಚರಿಕೆ ವಹಿಸಬೇಕು' ಎಂದು ನ್ಯಾಯಮೂರ್ತಿ ಚಂದ್ರಚೂಡ್ ಎಚ್ಚರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT