ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಬಿಬಿಎಸ್ ವಿದ್ಯಾರ್ಥಿ ಸಾವು ಪ್ರಕರಣ: ಸಿಬಿಐ ತನಿಖೆಗೆ

ಅರ್ಜಿದಾರರ ₹1 ಲಕ್ಷ ವೆಚ್ಚ ಪಾವತಿಸಲು ಬೆಂಗಳೂರು ಸಿಐಡಿಗೆ ‘ಸುಪ್ರೀಂ’ ನಿರ್ದೇಶನ
Last Updated 6 ನವೆಂಬರ್ 2022, 19:30 IST
ಅಕ್ಷರ ಗಾತ್ರ

ನವದೆಹಲಿ:2014ರಲ್ಲಿ ಮಂಗಳೂರಿನಲ್ಲಿ ನಡೆದ ಎಂಬಿಬಿಎಸ್ ವಿದ್ಯಾರ್ಥಿಯ ನಿಗೂಢ ಸಾವಿನ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿಲ್ಲ ಎಂದು ಸಿಬಿಐ ತನಿಖೆಗೆ ವಹಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಹೆಚ್ಚಿನ ತನಿಖೆಗೆ ನಿರ್ದೇಶಿಸಿರುವ ಬೆಂಗಳೂರು ಸಿಐಡಿ, ದುಡುಕಿನ ಮತ್ತು ನಿರ್ಲಕ್ಷ್ಯದ ಚಾಲನೆಗಾಗಿ ಮೃತನ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿದೆ.

‘ಬೆಂಗಳೂರಿನ ಸಿಐಡಿ ನಡೆಸಿದ ಮುಂದಿನ ತನಿಖೆಯಿಂದ ನಮಗೆ ತೃಪ್ತಿ ಇಲ್ಲ. ಸಮಗ್ರ ಮತ್ತು ಸೂಕ್ತ ತನಿಖೆ ನಂತರ ಸತ್ಯ ಹೊರಬರಬೇಕು. ಪ್ರಸ್ತುತ ಪ್ರಕರಣದಲ್ಲಿ ಸಿಐಡಿ ಸಮಗ್ರ ತನಿಖೆ ನಡೆಸದೆ ತನ್ನ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ’ ಎಂದು ನ್ಯಾಯಮೂರ್ತಿಗಳಾದ ಎಂ.ಆರ್.ಷಾ ಮತ್ತು ಎಂ.ಎಂ.ಸುಂದ್ರೇಶ್ ಅವರ ಪೀಠ ಹೇಳಿದೆ.

ಈ ಪರಿಸ್ಥಿತಿಯಲ್ಲಿ ಸಂವಿಧಾನದ 32 ನೇ ವಿಧಿ ಅಡಿ ಅಧಿಕಾರ ಚಲಾಯಿಸಲು ಮತ್ತು ತನಿಖೆಯನ್ನು ಬೆಂಗಳೂರಿನ ಸಿಬಿಐಗೆ ವರ್ಗಾಯಿಸಲು ಇದು ಸೂಕ್ತ ಪ್ರಕರಣವಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಮೃತರ ತಂದೆ ಎಂ. ಎಸ್. ರಾಧಾಕೃಷ್ಣನ್ ಪರ ವಕೀಲ ಜೋಗಿ ಸ್ಕಾರಿಯಾ ಅವರ ವಾದ ಆಲಿಸಿದ ನಂತರ ಸುಪ್ರೀಂ ಕೋರ್ಟ್ ನ. 3 ರಂದು ಆದೇಶ ನೀಡಿತು. ಎರಡು ವಾರಗಳಲ್ಲಿ ಎಲ್ಲಾ ವಸ್ತುಗಳನ್ನು ಸಿಬಿಐಗೆ ಹಸ್ತಾಂತರಿಸುವಂತೆ ಸಿಐಡಿಗೆ ನಿರ್ದೇಶಿಸಿತು.

ಅಲ್ಲದೆ, ಮೃತರ ವಿರುದ್ಧದ ಚಾರ್ಜ್ ಶೀಟ್ ಅನ್ನು ಬದಿಗಿಟ್ಟು, ನಾಲ್ಕು ವಾರಗಳಲ್ಲಿ ಅರ್ಜಿದಾರರಿಗೆ ಒಂದು ಲಕ್ಷ ರೂಪಾಯಿ ವೆಚ್ಚ ಪಾವತಿಸುವಂತೆ ಸಿಐಡಿಗೆ ಆದೇಶಿಸಿದೆ.

ಮಂಗಳೂರಿನ ಎಜೆ ಮೆಡಿಕಲ್ ಇನ್‌ಸ್ಟಿಟ್ಯೂಟ್ ಕುಂಟಿಕಾನದಲ್ಲಿ ಎಂಬಿಬಿಎಸ್ ವಿದ್ಯಾರ್ಥಿ, ತಮ್ಮ ಮಗ ರೋಹಿತ್ ರಾಧಾಕೃಷ್ಣನ್ 2014ರ ಮಾರ್ಚ್ 22ರಂದು ನಿಗೂಢವಾಗಿ ಸಾವನ್ನಪ್ಪಿದ್ದರು. ಆತನ ದೇಹವು ತಲೆಯಿಂದ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹೋಂಡಾ ಸಿಟಿ ಕಾರ್ ಹೊಂದಿದ್ದು, ಅವನಿಗೆ ಮೋಟಾರ್ ಸೈಕಲ್‌ ಓಡಿಸುವ ಅಭ್ಯಾಸವನ್ನು ಹೊಂದಿರಲಿಲ್ಲ ಎಂದು ಅರ್ಜಿದಾರರಾದ ರೋಹಿತ್ ರಾಧಕೃಷ್ಣನ್ ತಿಳಿಸಿದರು.

ಮೃತ ಸ್ನೇಹಿತರ ಪಾತ್ರ ಸೇರಿದಂತೆ ಹಲವಾರು ಸಂದರ್ಭಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಸ್ನೇಹಿತರ ಪಾತ್ರವು ಹೆಚ್ಚು ಅನುಮಾನಾಸ್ಪದವಾಗಿದೆ ಮತ್ತು ಅವರು ನೀಡಿದ ವಿವರಣೆಗಳು ವಿರೋಧಾಭಾಸಗಳಿಂದ ಕೂಡಿದೆ ಎಂದು ತಂದೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT