ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹ ಜೀವನ ಸಂಬಂಧ ನೋಂದಣಿಗೆ ನಿಯಮ ರೂಪಿಸಲು ಕೋರಿದ್ದ ಅರ್ಜಿ ವಜಾ

Last Updated 20 ಮಾರ್ಚ್ 2023, 11:04 IST
ಅಕ್ಷರ ಗಾತ್ರ

ನವದೆಹಲಿ: ಸಹ ಜೀವನ ಸಂಬಂಧಗಳ ನೋಂದಣಿಗೆ ಪೂರಕವಾಗಿ ನಿಯಮಗಳನ್ನು ರೂಪಿಸಲು ನಿರ್ದೇಶನ ನೀಡಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಜಾ ಮಾಡಿತು. ಇದೊಂದು ‘ಅಪಕ್ವ ಚಿಂತನೆ’ ಎಂದು ಅಭಿಪ್ರಾಯಪಟ್ಟಿತು.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು, ಅರ್ಜಿದಾರರ ಪರ ವಕೀಲರಾದ ಮಮತಾ ರಾಣಿ ಅವರಿಗೆ, ‘ನೀವು ಇವರಿಗೆ ರಕ್ಷಣೆ ಕೊಡಲು ಬಯಸುತ್ತಿದ್ದೀರೊ ಅಥವಾ ಸಹ ಜೀವನ ಸಂಬಂಧಕ್ಕೇ ಮುಂದಾಗಬಾರದು ಎಂದು ಬಯಸುತ್ತೀದ್ದೀರೊ’ಎಂದು ಪ್ರಶ್ನಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು, ‘ಸಹ ಜೀವನ ಜೋಡಿಗಳಿಗೆ ಸಾಮಾಜಿಕ ಭದ್ರತೆ ಇರುವಂತೆ ಅವರು ನೋಂದಣಿ ಮಾಡಿಕೊಳ್ಳಲು ಅವಕಾಶ ಇರಬೇಕು ಎಂದು ಬಯಸುತ್ತಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

‘ಸಹ ಜೀವನ ಸಂಬಂಧಗಳನ್ನು ನೋಂದಣಿ ಮಾಡಿ ಕೇಂದ್ರ ಸರ್ಕಾರ ಏನು ಮಾಡಬೇಕು. ಇದೆಂತಹ ಅಪಕ್ವ ಚಿಂತನೆ? ಇಂತಹ ಕೋರಿಕೆಯ ಅರ್ಜಿಗಳನ್ನು ಸಲ್ಲಿಸುವವರಿಗೆ ದೊಡ್ಡ ಮೊತ್ತದ ದಂಡ ವಿಧಿಸಲು ಇದು ಸಕಾಲ. ಈ ಅರ್ಜಿಯನ್ನು ವಜಾ ಮಾಡಲಾಗಿದೆ’ ಎಂದು ಪೀಠ ಅಭಿಪ್ರಾಯಪಟ್ಟಿತು.

ನ್ಯಾಯಮೂರ್ತಿಗಳಾದ ಪಿ.ಎಸ್‌.ನರಸಿಂಹ ಮತ್ತು ಜೆ.ಬಿ.ಪಾರ್ದಿವಾಲಾ ಅವರು ಪೀಠದ ಇತರ ಸದಸ್ಯರು. ವಕೀಲರ ಮೂಲಕ ರಾಣಿ ಎಂಬವರು ಅರ್ಜಿ ಸಲ್ಲಿಸಿದ್ದರು.

ಇತ್ತೀಚಿನ ಶ್ರದ್ಧಾ ವಾಲ್ಕರ್‌ ಕೊಲೆ ಪ್ರಕರಣ ಉಲ್ಲೇಖಿಸಿದ್ದ ಅರ್ಜಿದಾರರು, ಸಹ ಜೀವನ ಸಂಬಂಧಗಳಿಂದ ಸಮಾಜದಲ್ಲಿ ಅತ್ಯಾಚಾರ, ಕೊಲೆಯಂತಹ ಪ್ರಕರಣಗಳು ಹೆಚ್ಚುತ್ತಿವೆ ಎಂದು ಕಾರಣ ನೀಡಿದ್ದರು.

ನೋಂದಣಿ ಮಾಡಿದಲ್ಲಿ ಸಹ ಜೀವನ ಸಂಬಂಧದಲ್ಲಿರುವವರ ವೈವಾಹಿಕ ಸ್ಥಿತಿಗತಿ, ಕ್ರಿಮಿನಲ್‌ ಹಿನ್ನೆಲೆ ಹಾಗೂ ಇತರೆ ಮಾಹಿತಿಗಳು ಪರಸ್ಪರರು ಮತ್ತು ಸರ್ಕಾರದಲ್ಲಿ ಇರುತ್ತದೆ ಎಂದು ಹೇಳಿದ್ದರು.

ಕೊಲೆ, ಅತ್ಯಾಚಾರ ಪ್ರಕರಣಗಳ ಏರಿಕೆ ಅಲ್ಲದೆ, ಸಹ ಜೀವನ ಸಂಗಾತಿಯ ಮೇಲೆ ಮಹಿಳೆಯರು ಅತ್ಯಾಚಾರ ಕುರಿತಂತೆ ಸುಳ್ಳು ಆರೋಪ ಹೊರಿಸುವ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಸಾಕ್ಷ್ಯ ಗುರುತಿಸುವುದು ಕೋರ್ಟ್‌ಗಳಿಗೂ ಕಷ್ಟವಾಗಲಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT