ಸೋಮವಾರ, ಮಾರ್ಚ್ 1, 2021
24 °C
ಮಾಧ್ಯಮಗಳ ಕಾನೂನು ಚೌಕಟ್ಟು: ಪಿಐಎಲ್‌ ಸಲ್ಲಿಕೆ

ಮಾಧ್ಯಮಗಳ ಕಾನೂನು ಚೌಕಟ್ಟು ಕುರಿತು ‘ಸುಪ್ರೀಂ’ನಿಂದ ಇಂದು ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಾಧ್ಯಮಗಳ ಕಾರ್ಯ ನಿರ್ವಹಣೆಗೆ ಸಂಬಂಧಿಸಿದ ಕಾನೂನಿನ ಚೌಕಟ್ಟಿನ ಪರಿಶೀಲನೆಗೆ ಸಮಿತಿ ಯೊಂದನ್ನು ರಚಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಸೋಮವಾರ (ಜ. 25) ಕೈಗೆತ್ತಿಕೊಳ್ಳಲಿದೆ. 

ಮುಖ್ಯನ್ಯಾಯಮೂರ್ತಿ ಎಸ್‌.ಎ. ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ, ವಿ.ರಾಮಸುಬ್ರಮಣಿಯನ್‌ ಅವರಿರುವ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಲಿದೆ.

ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಥವಾ  ಹಾಲಿ ನ್ಯಾಯ ಮೂರ್ತಿ ನೇತೃತ್ವದಲ್ಲಿ ಪರಿಶೀಲನಾ ಸಮಿತಿ ರಚಿಸುವಂತೆ ಕೋರಿ ಚಿತ್ರ ನಿರ್ಮಾಪಕ ನೀಲೇಶ್‌ ನವಲಖಾ, ಸಿವಿಲ್‌ ಎಂಜಿನಿಯರ್ ನಿತಿನ್‌ ಮೇಮಾನೆ ಜಂಟಿಯಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

‘ಮುದ್ರಣ, ಎಲೆಕ್ಟ್ರಾನಿಕ್ ಮಾಧ್ಯಮ ಗಳ ವಿರುದ್ಧದ ದೂರುಗಳ ವಿಚಾರಣೆ ಗಾಗಿ ಮಾಧ್ಯಮ ನಾಯಮಂಡಳಿ ಸ್ಥಾಪಿಸಬೇಕು’ ಎಂದು ಕೋರಿದ್ದರು.

‘ಮಾಧ್ಯಮ ಕೂಡ ಒಂದು ವ್ಯವಹಾರ. ಅದರ ಕಾರ್ಯ, ವ್ಯಾಪ್ತಿ ಹಾಗೂ ಪ್ರಭಾವದಿಂದಾಗಿ ಮಾಧ್ಯಮ ಶಕ್ತಿಯುತವೂ ಆಗಿದೆ. ಹೀಗಾಗಿ, ಸಂವಿಧಾನದಲ್ಲಿ ನೀಡಲಾಗಿರುವ ನಿಯ ಮಗಳ ಅನುಸಾರವೇ ಅದರ ನಿಯಂತ್ರಣ ಅಗತ್ಯ’ ಎಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು