ಮಂಗಳವಾರ, ಮಾರ್ಚ್ 2, 2021
23 °C

ತೆಲಂಗಾಣದಲ್ಲಿ ಫೆ.1 ರಿಂದ 9 ಮತ್ತು 10ನೇ ತರಗತಿಗಳು ಪುನರಾರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ತೆಲಂಗಾಣದ ಎಲ್ಲಾ ಶಾಲೆಗಳಲ್ಲಿ 9 ಮತ್ತು 10ನೇ ತರಗತಿಗಳು ಫೆಬ್ರುವರಿ 1ರಿಂದ ಪುನರಾರಂಭವಾಗಲಿವೆ. ಈ ತರಗತಿಗಳು ಮೇ 26ರವರೆಗೆ ನಡೆಯಲಿವೆ.

‘ತೆಲಂಗಾಣದಲ್ಲಿ ಮೇ 17ರಿಂದ 26ರವರೆಗೆ ಎಸ್‌ಎಸ್‌ಸಿ (10ನೇ ತರಗತಿ) ಪರೀಕ್ಷೆಗಳಿಗೆ ದಿನಾಂಕ ನಿಗದಿಪಡಿಸಲಾಗಿದೆ’ ಎಂದು ತೆಲಂಗಾಣ ಶಾಲಾ ಶಿಕ್ಷಣ ಇಲಾಖೆಯು ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.

‘ಈ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕನಿಷ್ಠ ಹಾಜರಾತಿಯಲ್ಲಿ ವಿನಾಯಿತಿ ನೀಡಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೈದರಾಬಾದ್‌ ಮತ್ತು ಸಿಕಂದರಾಬಾದ್‌ನಲ್ಲಿ ಶಾಲೆಗಳು ಬೆಳಿಗ್ಗೆ 8.45ರಿಂದ ಸಂಜೆ 4ರ ತನಕ ಕಾರ್ಯ ನಿರ್ವಹಿಸಲಿವೆ. ಉಳಿದ ಜಿಲ್ಲೆಗಳಲ್ಲಿ ಬೆಳಿಗ್ಗೆ 9.30ರಿಂದ ಸಂಜೆ 4.45 ತನಕ ಶಾಲೆಗಳು ತೆರದಿರಲಿವೆ.

10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 10 ರಿಂದ 11 ಗಂಟೆಯ ತನಕ ಆನ್‌ಲೈನ್‌ ತರಗತಿ ನಡೆಯಲಿವೆ. 9ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಜೆ 4 ರಿಂದ 5 ಗಂಟೆಯ ತನಕ ಆನ್‌ಲೈನ್‌ ತರಗತಿಗಳೂ ನಡೆಯಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು