ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ, ಪ್ರಧಾನಿಗಾಗಿ ಬಂತು ಮತ್ತೊಂದು ವಿಶೇಷ ಬೋಯಿಂಗ್ ವಿಮಾನ

Last Updated 26 ಅಕ್ಟೋಬರ್ 2020, 1:40 IST
ಅಕ್ಷರ ಗಾತ್ರ

ನವದೆಹಲಿ: ಅತಿಗಣ್ಯರ ಪ್ರವಾಸಕ್ಕೆಂದು ವಿಶೇಷವಾಗಿ ವಿನ್ಯಾಸಗೊಳಿಸಲಾದಬೋಯಿಂಗ್ 777ರ 2ನೇ ವಿಶೇಷವಿಮಾನ ಭಾರತಕ್ಕೆ ಭಾನುವಾರ ಬಂದಿದೆ. ಈ ವಿಮಾನ ಬಳಸುವ ಅತಿಗಣ್ಯರ ಪಟ್ಟಿಯಲ್ಲಿರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿ ಹುದ್ದೆಗಳು ಇವೆ.

ಭಾರತ ಮತ್ತು ಅಮೆರಿಕನಡುವಣ ಅಂತರವನ್ನು ಈ ವಿಮಾನ ಎಲ್ಲಿಯೂ ನಿಲ್ಲದೆ ಕ್ರಮಿಸಬಲ್ಲದು.

ಅತಿಗಣ್ಯರ ಬಳಕೆಗೆಂದು ರೂಪಿಸಿದ್ದ ಮೊದಲ ವಿಶೇಷ ವಿಮಾನಅಕ್ಟೋಬರ್ 1ರಂದುಭಾರತಕ್ಕೆ ಬಂದಿತ್ತು. ಆ ವಿಮಾನದ ಕಾರ್ಯಾಚರಣೆ ಸಂದರ್ಭದಲ್ಲಿ ಕೆಲ ದೋಷಗಳು ಕಂಡುಬಂದಿದ್ದವು. ಈ ವಿಚಾರವನ್ನು ಭಾರತದ ಅಧಿಕಾರಿಗಳು ಬೋಯಿಂಗ್‌ ಕಂಪನಿಯ ಗಮನಕ್ಕೆ ತಂದಿದ್ದರು.

ಬೋಯಿಂಗ್‌ 777-300 ಎಆರ್‌ ಮಾದರಿಯ ಎರಡು ವಿಮಾನಗಳು 2018ರಲ್ಲಿಏರ್‌ ಇಂಡಿಯಾಗೆ ಸೇರ್ಪಡೆಗೊಂಡಿದ್ದವು. ಇವುಗಳಲ್ಲಿ ಅಗತ್ಯಮಾರ್ಪಾಡು ಮಾಡಲೆಂದುಬೋಯಿಂಗ್‌ನ ಡಲ್ಲಾಸ್ ಕಾರ್ಖಾನೆಗೆ ಕಳಿಸಿಕೊಡಲಾಗಿತ್ತು. ಏರ್‌ ಇಂಡಿಯಾ ಮತ್ತು ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಗಳು ಮತ್ತು ತಂತ್ರಜ್ಞರನ್ನೂ ಕೇಂದ್ರ ಸರ್ಕಾರ ಬೋಯಿಂಗ್ ಕಾರ್ಖಾನೆಗೆ ಕಳಿಸಿಕೊಟ್ಟಿತ್ತು.

ಕ್ಷಿಪಣಿ ನಿರೋಧ ವ್ಯವಸ್ಥೆಯೂ ಸೇರಿದಂತೆ ಹಲವುಸ್ವಯಂ ರಕ್ಷಣಾ ವ್ಯವಸ್ಥೆಗಳುಈ ವಿಮಾನದಲ್ಲಿವೆ. ಅಮೆರಿಕ ಅಧ್ಯಕ್ಷರು ಬಳಸುವ ಏರ್‌ ಫೋರ್ಸ್‌ ವಿಮಾನದಲ್ಲಿರುವ ಎಲ್ಲ ರಕ್ಷಣಾ ವ್ಯವಸ್ಥೆಗಯನ್ನೂ ಭಾರತದ ಅತಿಗಣ್ಯರ ಬಳಕೆಗೆ ಖರೀದಿಸಿರುವ ವಿಮಾನಗಳು ಹೊಂದಿವೆ. ಈ ವಿಮಾನಗಳನ್ನು ಏರ್‌ ಇಂಡಿಯಾ ಒನ್ ಎಂದು ಕರೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT