ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮಗೂ ಧಾರ್ಮಿಕ ಕೇಂದ್ರಗಳ ಸ್ವಯಂ ನಿರ್ವಹಣೆಯ ಹಕ್ಕು ನೀಡಿ: ಸ್ವಾಮೀಜಿ ಪಿಐಎಲ್

Last Updated 31 ಜುಲೈ 2021, 9:04 IST
ಅಕ್ಷರ ಗಾತ್ರ

ನವದೆಹಲಿ: ಧಾರ್ಮಿಕ ಮತ್ತು ದತ್ತಿ ಕೇಂದ್ರಗಳಿಗೆ ಏಕರೂಪ ಸಂಹಿತೆಗೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸ್ವಾಮೀಜಿಯೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ದೇಶಾದ್ಯಂತ ಹಿಂದೂ ದೇವಾಲಯಗಳ ಮೇಲೆ ಅಧಿಕಾರಿಗಳ ನಿಯಂತ್ರಣವಿದೆ, ಇತರ ಕೆಲವು ಸಮುದಾಯಗಳ ಧಾರ್ಮಿಕ ಕೇಂದ್ರಗಳ ನಿರ್ವಹಣೆವನ್ನು ಸ್ವಯಂ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ ಎಂಬುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಸ್ವಾಮಿ ಜೀತೇಂದ್ರಾನಂದ್ ಸರಸ್ವತಿ ಎಂಬವರು ಈ ಪಿಐಎಲ್ ಸಲ್ಲಿಸಿದ್ದು, ಹಿಂದೂಗಳು, ಜೈನರು, ಬೌದ್ಧರು ಮತ್ತು ಸಿಖ್ಖರು ತಮ್ಮ ಧಾರ್ಮಿಕ ಚರ-ಸ್ಥಿರ ಆಸ್ತಿಗಳನ್ನು ಹೊಂದಲು, ನಿರ್ವಹಿಸಲು ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಪಾರ್ಸಿಗಳ ರೀತಿಯೇ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಘೋಷಿಸಲು ನಿರ್ದೇಶನ ನೀಡಬೇಕೆಂದು ಕೋರಲಾಗಿದೆ.

ಹಿಂದೂಗಳು ಮತ್ತು ಸಿಖ್ಖರಂತಹ ಕೆಲವು ಧಾರ್ಮಿಕ ಪಂಗಡಗಳ ಧಾರ್ಮಿಕ ಸ್ಥಳಗಳನ್ನು ನಿಯಂತ್ರಿಸುವ ಮೂಲಕ ಧಾರ್ಮಿಕ ವ್ಯವಹಾರಗಳ ನಿರ್ವಹಣೆಯ ವಿಷಯದಲ್ಲಿ ರಾಜ್ಯಗಳು ತಾರತಮ್ಯ ಮಾಡುತ್ತಿವೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಕಲಂ 26-27ರ ಅನ್ವಯ ಧಾರ್ಮಿಕ ವ್ಯವಹಾರಗಳ ನಿರ್ವಹಣೆಯ ವಿಷಯದಲ್ಲಿ ಧರ್ಮಗಳ ನಡುವೆ ಯಾವುದೇ ತಾರತಮ್ಯ ಮಾಡುವಂತಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ರಾಜ್ಯಗಳು ಸಂವಿಧಾನಾತ್ಮಕವಾಗಿ ಸಮರ್ಥವಾಗಿಲ್ಲ ಅಥವಾ ಧಾರ್ಮಿಕ ವ್ಯವಹಾರಗಳ ನಿರ್ವಹಣೆಯನ್ನು ಮಾಡುವ ಸಾಮರ್ಥ್ಯ ಹೊಂದಿಲ್ಲ. ಧಾರ್ಮಿಕ ಆಚರಣೆಗಳು ಮತ್ತು ನಂಬಿಕೆಗಳು ವೈಯಕ್ತಿಕವಾದುದಾಗಿವೆ ಎಂದು ವಿವರಿಸಿದ್ದಾರೆ.

ವಕೀಲ ಸಂಜಯ್ ಕುಮಾರ್ ಪಾಠಕ್ ಮೂಲಕ ಸಲ್ಲಿಸಲಾದ ಮನವಿಯು 'ಧಾರ್ಮಿಕ ಮತ್ತು ದತ್ತಿ ಕೇಂದ್ರಗಳಿಗೆ ಏಕರೂಪ ಸಂಹಿತೆ' ರೂಪಿಸಲು ಕೇಂದ್ರ ಅಥವಾ ಭಾರತದ ಕಾನೂನು ಆಯೋಗಕ್ಕೆ ನಿರ್ದೇಶನ ನೀಡಲು ಕೋರಿದೆ.

ಈ ಹಿಂದೆ, ಇದೇ ರೀತಿ, ಧಾರ್ಮಿಕ ಮತ್ತು ದತ್ತಿಗಳಿಗೆ ಏಕರೂಪದ ಸಂಹಿತೆಯನ್ನು ಕೋರಿ ದೇಶದಾದ್ಯಂತ ಹಿಂದೂ ದೇವಾಲಯಗಳ ಮೇಲೆ ಅಧಿಕಾರಿಗಳ ನಿಯಂತ್ರಣವನ್ನು ಉಲ್ಲೇಖಿಸಿ ವಕೀಲ ಮತ್ತು ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT