ಶುಕ್ರವಾರ, ಸೆಪ್ಟೆಂಬರ್ 30, 2022
25 °C

ಲುಫ್ತಾನ್ಸ 2 ವಿಮಾನಗಳು ರದ್ದು: ದೆಹಲಿ ಏರ್‌ಪೋರ್ಟ್‌ನಲ್ಲಿ ಉಳಿದ 700 ಪ್ರಯಾಣಿಕರು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪೈಲಟ್‌ಗಳ ಮುಷ್ಕರದ ಹಿನ್ನೆಲೆಯಲ್ಲಿ ಜರ್ಮನಿ ಮೂಲದ ಲುಫ್ತಾನ್ಸ ವಿಮಾನಯಾನ ಸಂಸ್ಥೆಯು ಎರಡು ವಿಮಾನಗಳ ಹಾರಾಟವನ್ನು ರದ್ದು ಮಾಡಿದ್ದು, 700 ಪ್ರಯಾಣಿಕರು ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ(ಐಜಿಐ) ಟರ್ಮಿನಲ್–3ರಲ್ಲೇ ಉಳಿಯುವಂತಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.

ವಿಮಾನ ರದ್ದು ಖಂಡಿಸಿ ನಿಲ್ದಾಣದ ಹೊರಗಡೆ ಸೇರಿದ್ದ ಪ್ರಯಾಣಿಕರ ಸಂಬಂಧಿಕರು ಟಿಕೆಟ್ ಹಣದ ಮರುಪಾವತಿ ಮತ್ತು ಪರ್ಯಾಯ ವಿಮಾನದ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು.

ಐಜಿಐನ ನಿರ್ಗಮನ ದ್ವಾರದ ಟರ್ಮಿನಲ್–3ರ ಗೇಟ್ ನಂಬರ್–1ರ ಬಳಿಯ ರಸ್ತೆಯಲ್ಲಿ ಜನರ ಗುಂಪು ಸೇರಿರುವ ಬಗ್ಗೆ ತಡರಾತ್ರಿ 12.15ರ ಸುಮಾರಿಗೆ ನಮಗೆ ಮಾಹಿತಿ ಸಿಕ್ಕಿತು ಎಂದು ನಿಲ್ದಾಣದ ಡಿಸಿಪಿ ತನು ಶರ್ಮಾ ಹೇಳಿದ್ದಾರೆ.

ವಿಮಾನದ ಟರ್ಮಿನಲ್ ಒಳಗೆ ಸಿಲುಕಿರುವ ತಮ್ಮ ಸಂಬಂಧಿಕರಿಗೆ ಟಿಕೆಟ್ ಹಣ ಮರುಪಾವತಿ ಮತ್ತು ಪರ್ಯಾಯ ವ್ಯವಸ್ಥೆಗೆ ಒತ್ತಾಯಿಸಿದ್ದ ಪ್ರಯಾಣಿಕರ ಸಂಬಂಧಿಕರ ಗುಂಪು ಟ್ರಾಫಿಕ್ ಜಾಮ್‌ಗೆ ಕಾರಣವಾಗಿತ್ತು ಎಂದು ಅವರು ಹೇಳಿದ್ಧಾಎ.

ಯಾವುದೇ ಮುನ್ಸೂಚನೆ ನೀಡದೆ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದಾಗ ಆಕ್ರೋಶಗೊಂಡು ಪ್ರತಿಭಟನೆಗೆ ಮುಂದಾದ ಪ್ರಯಾಣಿಕರನ್ನು ಸಿಐಎಸ್‌ಎಫ್ ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿ ಸಮಾಧಾನಪಡಿಸಿದರು.

ಲುಫ್ಥಾನ್ಸದ ಒಂದು ವಿಮಾನ 300 ಪ್ರಯಾಣಿಕರೊಂದಿಗೆ ಫ್ರಾಂಕ್‌ಫರ್ಟ್‌ಗೆ ತಡ ರಾತ್ರಿ 2.50 ಕ್ಕೆ ಹೊರಡಬೇಕಾಗಿತ್ತು.ಮತ್ತೊಂದು ವಿಮಾನ 400 ಪ್ರಯಾಣಿಕರೊಂದಿಗೆ ಮ್ಯೂನಿಚ್‌ಗೆ 1.10 ಕ್ಕೆ ಹೊರಡಬೇಕಿತ್ತು, ಅದನ್ನು ರದ್ದುಗೊಳಿಸಲಾಗಿದೆ ಎಂದು ಡಿಸಿಪಿ ಹೇಳಿದರು.

ಆದರೆ, ಈ ಮಧ್ಯೆ ಲುಫ್ಥಾನ್ಸದ ಪೈಲಟ್‌ಗಳು ಸಂಬಳ ಹೆಚ್ಚಳಕ್ಕೆ ಒತ್ತಾಯಿಸಿ ಒಂದು ದಿನದ ಮುಷ್ಕರವನ್ನು ಘೋಷಿಸಿದ್ದ ಕಾರಣ ಲುಫ್ಥಾನ್ಸ ಪ್ರಧಾನ ಕಚೇರಿಯಿಂದ ಎರಡೂ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಮಾನಯಾನ ಸಂಸ್ಥೆಯು ಪರ್ಯಾಯ ವ್ಯವಸ್ಥೆಗಳನ್ನು ಮಾಡಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು