ಗುರುವಾರ , ಜೂನ್ 30, 2022
27 °C

ನದಿಗೆ ಉರುಳಿದ ಸೇನಾ ವಾಹನ: ಏಳು ಯೋಧರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಸೇನೆಯ 26 ಯೋಧರು ಪ್ರಯಾಣಿಸುತ್ತಿದ್ದ ವಾಹನವು ನಿಯಂತ್ರಣ ತಪ್ಪಿ ಶುಕ್ರವಾರ ಲಡಾಖ್‌ನ ತುರ್ತುಕ್‌ ವಲಯದಲ್ಲಿ ಶೋಕ ನದಿಗೆ ಉರುಳಿ ಬಿದ್ದಿದ್ದು, ಏಳು ಮಂದಿ ಯೋಧರು ಮೃತಪಟ್ಟಿದ್ದಾರೆ.

ಪರ್ತಾಪುರ್‌ನಿಂದ ಹನಿಫ್‌ ಉಪವಲಯದ ಶಿಬಿರಕ್ಕೆ ಯೋಧರು ತೆರಳುತ್ತಿದ್ದರು. ವಾಹನದಲ್ಲಿದ್ದ ಇತರೆ ಯೋಧರು ಗಾಯಗೊಂಡಿದ್ದು, ಪರ್ತಾಪುರ್‌ನ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆಯನ್ನು ಒದಗಿಸಲು ಕ್ರಮವಹಿಸಲಾಗಿದೆ. ಲೇಹ್‌ನಿಂದ ತಜ್ಞ ವೈದ್ಯರನ್ನು ಕರೆಸಲಾಗಿದೆ ಎಂದು ತಿಳಿಸಿದ್ದಾರೆ. ಶೋಕ ಅನ್ನು ‘ಸಾವಿನ ನದಿ’ ಎಂದು ಗುರುತಿಸಲಾಗುತ್ತದೆ. ಇದು,ಸಿಂಧೂ ನದಿಯ ಉಪನದಿಯಾಗಿದ್ದು, 550 ಕಿ.ಮೀ ನಷ್ಟು ದೂರ ಉತ್ತರ ಲಡಾಖ್‌, ಗಿಲ್‌ಗಿಟ್‌, ಬಾಲ್ಟಿಸ್ತಾನ್‌ ವಲಯದಲ್ಲಿ ಹರಿಯುತ್ತದೆ.

***

ನಮ್ಮ ವೀರ ಸೈನಿಕರು ಸಾವನ್ನಪ್ಪಿರುವ ವಿಚಾರ ಕೇಳಿ ಬಹಳ ದುಃಖವಾಯಿತು. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು ಮತ್ತು ಗಾಯಗೊಂಡಿರುವ ಎಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಕೂ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು