ಶುಕ್ರವಾರ, ಸೆಪ್ಟೆಂಬರ್ 25, 2020
24 °C
ಸಿನಿಮಾ ರಂಗ ನಿಂದಿಸುವವರ ವಿರುದ್ಧದ ಹೇಳಿಕೆ

ಸಂಸದೆ ಜಯಾ ಬಚ್ಚನ್ ಹೇಳಿಕೆ ಬೆಂಬಲಿಸಿದ ಶಿವಸೇನಾ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ರಾಜ್ಯಸಭೆಯಲ್ಲಿ ಬಾಲಿವುಡ್‌ ಚಿತ್ರರಂಗವನ್ನು ಟೀಕಿಸುವವರ ವಿರುದ್ಧ ಹರಿಹಾಯ್ದಿರುವ ಸಂಸದೆ ಜಯಾಬಚ್ಚನ್ ಅವರ ನಡೆಯನ್ನು ಶಿವಸೇನೆ ಬೆಂಬಲಿಸಿದೆ.

'ಇಂಥ ಆರೋಪ ಮಾಡುವವರು ಆಷಾಢಭೂತಿತನದ ಧೋರಣೆ ಮತ್ತು ದ್ವಿಮುಖ ನೀತಿಯ ಚಾಳಿಯುಳ್ಳವರು’ ಎಂದು ಶಿವಸೇನೆ ತನ್ನ ಪಕ್ಷದ ಮುಖವಾಣಿ ’ಸಾಮ್ನಾ’ದ ಸಂಪಾದಕೀಯದಲ್ಲಿ ಹೇಳಿದೆ.

ಜಯಾಬಚ್ಚನ್ ಅವರ ಹೇಳಿಕೆಯನ್ನು ಬೆಂಬಲಿಸುವ ಜತೆಗೆ ಸಿನಿಮಾ ರಂಗದ ಎಲ್ಲ ಕಲಾವಿದರು ಮತ್ತು ತಂತ್ರಜ್ಞರು ಮಾದಕದ್ರವ್ಯಗಳ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಹೇಳುವವರಿಗೆ ಉದ್ದೀಪನಾ ಮದ್ದು ಪರೀಕ್ಷೆ (ಡೋಪಿಂಗ್ ಟೆಸ್ಟ್‌) ಮಾಡಬೇಕು ಎಂದು ಆಗ್ರಹಿಸಿದೆ.

ಭೋಜ್‌ಪುರಿ ನಟ ಮತ್ತು ಬಿಜೆಪಿ ಸಂಸದ ರವಿಕಿಶನ್ ಅವರು 'ಚಿತ್ರರಂಗದಲ್ಲಿ ಮಾದಕ ವ್ಯಸನದ ಸಮಸ್ಯೆ ಇದೆ’ ಎಂದು ಹೇಳಿಕೆ ನೀಡಿದ ಬೆನ್ನಲ್ಲಿ, ಜಯಾ ಬಚ್ಚನ್ ಅವರು ರಾಜ್ಯಸಭೆಯಲ್ಲಿ ಮಂಗಳವಾರ ಈ ರೀತಿ ಪ್ರತಿಕ್ರಿಯಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು