ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನದಲ್ಲಿ ಸಿಂಹಿಣಿ ದಾಳಿ: ಆರು ಜನರಿಗೆ ಗಾಯ

Last Updated 17 ಜುಲೈ 2022, 16:23 IST
ಅಕ್ಷರ ಗಾತ್ರ

ಆಮರೇಲಿ: ರಾಜಸ್ಥಾನದ ಆಮರೇಲಿ ಜಿಲ್ಲೆಯಲ್ಲಿ ಗೀರ್‌ ಅರಣ್ಯದಿಂದ ತಪ್ಪಿಸಿಕೊಂಡಿದ್ದ ಸಿಂಹಿಣಿಯೊಂದು ಆರು ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ.

ಆಮರೇಲಿ ಜಿಲ್ಲೆಯಜಾಫರ್‌ಬಾರ್ ಎಂಬ ಅರಣ್ಯ ವಲಯದ ಬಾಬರಕೋಟ್ ಎಂಬ ಹಳ್ಳಿಯಲ್ಲಿ ಈ ಘಟನೆ ಶನಿವಾರ ನಡೆದಿರುವುದಾಗಿ ವರದಿಯಾಗಿದೆ.

ಸಿಂಹಿಣಿ ಶನಿವಾರ ಬೆಳಿಗ್ಗೆ ಮೂವರ ಮೇಲೆ ದಾಳಿ ಮಾಡಿತ್ತು. ಮತ್ತೆ ಸಂಜೆ ಅದೇ ಪ್ರದೇಶದಲ್ಲಿ ಮತ್ತೆ ಮೂವರ ಮೇಲೆ ದಾಳಿ ಮಾಡಿದೆ ಎಂದು ಡಿಸಿಎಫ್ ಜಯಂತ್ ಪಟೇಲ್ ತಿಳಿಸಿದ್ದಾರೆ.

ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಒಬ್ಬನ ಪರಿಸ್ಥಿತಿ ಗಂಭೀರವಾಗಿದೆ ಎಂದು ಅವರು ತಿಳಿಸಿದ್ದಾರೆ. ಸದ್ಯ ಆ ಸ್ಥಳದಲ್ಲಿ ಜನರ ಸಂಚಾರವನ್ನು ನಿಷೇಧಿಸಲಾಗಿದೆ. ಸಿಂಹಿಣಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜುಲಾ ಶಾಸಕ ಹೀರಾ ಸೋಲಂಕಿ ಸ್ಥಳಕ್ಕೆ ಭೇಟಿ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT