ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಾಜಕತೆಗೆ ಯತ್ನದ ವಿರುದ್ಧ ಜಾಗೃತಿ ಅಗತ್ಯ: ಆರ್‌ಎಸ್‌ಎಸ್‌

Last Updated 13 ಮಾರ್ಚ್ 2023, 23:21 IST
ಅಕ್ಷರ ಗಾತ್ರ

ಸಮಾಲಖಾ, ಹರಿಯಾಣ: ‘ದೇಶದ ಒಳಗೆ ಮತ್ತು ಹೊರಗಡೆ ಹಿಂದುತ್ವ ಚಿಂತನೆ ವಿರೋಧಿಸುತ್ತಿರುವ ಕೆಲವು ಶಕ್ತಿಗಳು ಸಮಾಜದಲ್ಲಿ ಅರಾಜಕತೆ ಮೂಡಿಸಲು ಸಂಚು ನಡೆಸುತ್ತಿವೆ. ಅಂತಹ ಚಿಂತನೆಯನ್ನು ವಿಫಲಗೊಳಿಸುವ ಅಗತ್ಯವಿದೆ’ ಎಂದು ಆರ್‌ಎಸ್‌ಎಸ್‌ ಹೇಳಿದೆ.

ಇಲ್ಲಿ ನಡೆದ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉನ್ನತಾಧಿಕಾರ ಸಮಿತಿಯಾದ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಈ ಬಗ್ಗೆ ನಿರ್ಣಯವನ್ನು ಕೈಗೊಳ್ಳಲಾಗಿದೆ.

ವಿಶ್ವದ ಅನೇಕ ರಾಷ್ಟ್ರಗಳು ಭಾರತವನ್ನು ಗೌರವಿಸುತ್ತವೆ. ಕೆಲ ಶಕ್ತಿಗಳಿಗೆ, ಸ್ವಾವಲಂಬನೆ ಆಧರಿಸಿದ ಭಾರತೀಯತೆಯ ಪುನರುತ್ಥಾನ ಸಹಿಸಲಾಗುತ್ತಿಲ್ಲ. ಇಂಥ ಶಕ್ತಿಗಳೇ ದೇಶದ ಒಳಗೆ ಮತ್ತು ಹೊರಗಡೆ ಹಿಂದುತ್ವದ ಚಿಂತನೆಯನ್ನು ವಿರೋಧಿಸುತ್ತಿವೆ. ಸಮಾಜದಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿವೆ. ಇವುಗಳ ವಿರುದ್ಧ ಜಾಗೃತಿ ಅಗತ್ಯ ಎಂದು ಹೇಳಲಾಗಿದೆ.

ಭಾನುವಾರ ಆರಂಭವಾದ ವಾರ್ಷಿಕ ಸಭೆಯಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್, ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹಾಗೂ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು. ವಿಎಚ್‌ಪಿ ಒಳಗೊಂಡು ಆರ್‌ಎಸ್‌ಎಸ್‌ ಜೊತೆಗೆ ಗುರುತಿಸಿಕೊಂಡ 34 ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಭೆಯು ಮಂಗಳವಾರ ಅಂತ್ಯಗೊಳ್ಳಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT