ಶುಕ್ರವಾರ, ಮಾರ್ಚ್ 24, 2023
23 °C

ಕೆಲವರು ಬೇಕೆಂದೇ ಚೀನಾ ಕುರಿತು ಸುಳ್ಳುಸುದ್ದಿ ಹರಡುತ್ತಿದ್ದಾರೆ: ಜೈಶಂಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪುಣೆ: ಭಾರತ– ಚೀನಾ ಗಡಿ ಬಿಕ್ಕಟ್ಟಿನ ಕುರಿತು ಕೆಲವರು ರಾಜಕೀಯ ಉದ್ದೇಶಕ್ಕಾಗಿ ಬೇಕೆಂದೇ ಸುಳ್ಳುಸುದ್ದಿ ಹರಡುತ್ತಿದ್ದಾರೆ. 1962ರಲ್ಲಿ ಚೀನಾ ಕಬಳಿಸಿದ್ದ ಭಾರತದ ಭೂಪ್ರದೇಶವನ್ನು ಉಲ್ಲೇಖಿಸಿ ಅದನ್ನು ಇತ್ತೀಚಿನ ವಿದ್ಯಮಾನ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಶನಿವಾರ ಹೇಳಿದರು.

ತಮ್ಮ ‘ದಿ ಇಂಡಿಯ ವೇ’ ಪುಸ್ತಕದ ಮರಾಠಿ ಅನುವಾದ ‘ಭಾರತ್‌ ಮಾರ್ಗ್‌’ದ ಬಿಡುಗಡೆ ಸಮಾರಂಭದಲ್ಲಿ ಜನರ ಜೊತೆ ಜೈಶಂಕರ್‌ ಸಂವಾದ ನಡೆಸಿದರು. ಆ ವೇಳೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಚೀನಾ ವಿಷಯದಲ್ಲಿ ಭಾರತದ ಸಾಮರ್ಥ್ಯದ ಕುರಿತು ವಿರೋಧ ಪಕ್ಷಗಳಿಗೆ ವಿಶ್ವಾಸ ಏಕೆ ಇಲ್ಲ ಎಂದರೆ, ಅವರು ರಾಜಕೀಯ ಉದ್ದೇಶಕ್ಕಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ಬೇಕೆಂದೇ ಸುಳ್ಳು ಸುದ್ದಿ ಹರಡುತ್ತಿದ್ದಾರೆ’ ಎಂದರು.

ಇತ್ತೀಚೆಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ನೀಡಿದ್ದ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಅವರು, ‘1962ರಲ್ಲಿ ಚೀನಾ ಆಕ್ರಮಿಸಿಕೊಂಡಿದ್ದ ಭಾರತದ ಭೂಪ್ರದೇಶದ ಕುರಿತು ಕೆಲವರು ಮಾತನಾಡುತ್ತಾರೆ. ಆದರೆ ಸಂಪೂರ್ಣ ಸತ್ಯವನ್ನು ಜನರಿಗೆ ತಿಳಿಸುವುದಿಲ್ಲ’ ಎಂದರು. 

ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಿಂಧೂ ಜಲ ಒಪ್ಪಂದ (ಐಡಬ್ಲ್ಯುಟಿ) ಕುರಿತು ಮಾತನಾಡಿದ ಅವರು, ಇದೊಂದು ತಾಂತ್ರಿಕ ವಿಷಯ. ಈ ಕುರಿತು ಉಭಯ ದೇಶಗಳ ಪ್ರತಿನಿಧಿಗಳು ಮಾತುಕತೆ ನಡೆಸಲಿದ್ದಾರೆ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು