ಕೋಲ್ಕತ್ತ: ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಭದ್ರತೆ ಒದಗಿಸುವ ದೃಷ್ಟಿಯಿಂದ ಆಗ್ನೇಯ ರೈಲ್ವೆ ವಿಭಾಗ ‘ಆಪರೇಷನ್ ಮೈ ಸಹೇಲಿ‘ ಎಂಬ ಹೊಸ ಯೋಜನೆಯೊಂದನ್ನು ಆರಂಭಿಸಿದೆ.

ಇದೊಂದು ಪ್ರಾಯೋಗಿಕ ಯೋಜನೆ. ಆರಂಭಿಕವಾಗಿ ಸೆಪ್ಟೆಂಬರ್ 18ರಿಂದ ಹೌರಾ–ಯಶವಂತಪುರ ತುರಂತೊ ವಿಶೇಷ ರೈಲು, ಹೌರಾ–ಅಹ್ಮದಾಬಾದ್ ವಿಶೇಷ ರೈಲು ಮತ್ತು ಹೌರಾ–ಮುಂಬೈ ವಿಶೇಷ ರೈಲುಗಳಲ್ಲಿ ಅನುಷ್ಠಾನಗೊಳಿಸಲಾಗಿದೆ.

ಪ್ರಯಾಣ ಆರಂಭಿಸುವ ಸ್ಥಳದಿಂದ, ತಲುಪುವ ಸ್ಥಳದವರೆಗೆ ಮಹಿಳಾ ಪ್ರಯಾಣಿಕರಿಗೆ ರಕ್ಷಣೆ ನೀಡುವುದು ಈ ಯೋಜನೆ ಉದ್ದೇಶ.

ಯೋಜನೆಯ ವಿವರ ನೀಡಿದಆಗ್ನೇಯ ರೈಲ್ವೆ ವಿಭಾಗದ ಇನ್ಸ್ಪೆಕ್ಟರ್ ಜನರಲ್ ಹಾಗೂ ಪ್ರಧಾನ ಮುಖ್ಯ ಭದ್ರತಾ ಆಯುಕ್ತ ಡಿ.ಬಿ.ಕಸಾರ್, ‘ಮಹಿಳಾ ಸಬ್ ಇನ್ಸ್ಪೆಕ್ಟರ್ಗಳನ್ನೊಳಗೊಂಡ ತಂಡ, ಪ್ರಯಾಣ ಆರಂಭಿಸುವ ಸ್ಥಳದಲ್ಲಿ ಮಹಿಳಾ ಪ್ರಯಾಣಿಕರಿಗೆ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳು ಮತ್ತು ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳನ್ನು ನೀಡುತ್ತದೆ. ತಂಡದ ಸದಸ್ಯರು ಪ್ರಯಾಣಿಕರ ಆಸನದ ಸಂಖ್ಯೆಗಳನ್ನು ದಾಖಲಿಸಿಕೊಳ್ಳುತ್ತಾರೆ. ಜತೆಗೆ ಅವರ ಸಂಪರ್ಕ ಸಂಖ್ಯೆಗಳನ್ನು ಸಂಗ್ರಹಿಸಿಕೊಂಡು, ಪ್ರಯಾಣದುದ್ದಕ್ಕೂ ಅವರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಎಲ್ಲ ನಿಗದಿತ ನಿಲುಗಡೆ ತಾಣಗಳು ಮತ್ತು ಪ್ರಯಾಣಿಕರು ತಲುಪುವ ಕೊನೆಯ ನಿಲ್ದಾಣಕ್ಕೂ, ಮಹಿಳಾ ಪ್ರಯಾಣಿಕರ ಮಾಹಿತಿಯನ್ನು ರವಾನಿಸಲಾಗಿರುತ್ತದೆ‘ ಎಂದು ವಿವರಿಸಿದರು.

‘ಈ ಯೋಜನೆ ಮಹಿಳಾ ಪ್ರಯಾಣಿಕರಿಗೆ ಪ್ರಯಾಣದ ಸಮಯದಲ್ಲಿ ಸುರಕ್ಷಿತ ಹಾಗೂ ಆರಾಮದಾಯಕ ವಾತಾವರಣ ಕಲ್ಪಿಸುವ ಪ್ರಯತ್ನವಾಗಿದೆ‘ ಎಂದು ಕಸರ್ ತಿಳಿಸಿದ್ದಾರೆ.

‘ನಿರ್ಭಯಾ ನಿಧಿ‘ಯಡಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ರೈಲ್ವೆ ಇಲಾಖೆಯ ಯಾವುದೇ ಅನುದಾನವನ್ನು ಇದಕ್ಕೆ ಬಳಸಲಾಗುತ್ತಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.