ಶನಿವಾರ, ಅಕ್ಟೋಬರ್ 31, 2020
21 °C
ವದಂತಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಎಸ್‌.ಪಿ. ಚರಣ್‌

ಎಸ್‌ಪಿಬಿ ಸಾವು: ಆಸ್ಪತ್ರೆಯು ಬಾಕಿ ಹಣ ತೆಗೆದುಕೊಂಡಿಲ್ಲ ಎಂದು ಚರಣ್‌ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ‘ತಂದೆಯ ಮೃತದೇಹವನ್ನು ಮನೆಗೆ ಸ್ಥಳಾಂತರಿಸುವ ಮೊದಲು ಚಿಕಿತ್ಸೆಯ ಉಳಿದ ಮೊತ್ತವನ್ನು ಪಾವತಿಸಲು ಬಿಲ್‌ ಕೇಳಿದ ಸಂದರ್ಭದಲ್ಲಿ ಆಸ್ಪತ್ರೆಯು ಹಣ ತೆಗೆದುಕೊಳ್ಳಲು ನಿರಾಕರಿಸಿದೆ’ ಎನ್ನುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳಿಗೆ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರ ಮಗ ಎಸ್‌.ಪಿ.ಚರಣ್‌ ಅವರು ಸೋಮವಾರ ಸ್ಪಷ್ಟನೆ ನೀಡಿದ್ದಾರೆ.

ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರ ನಿಧನದ ನಂತರ ಆಸ್ಪತ್ರೆಯ ವೆಚ್ಚದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳ ಕುರಿತು ಚರಣ್‌ ಭಾವನಾತ್ಮಕವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ ಹಾಗೂ ಕುಟುಂಬದ ನಡುವಿನ ಹಣಕಾಸು ವ್ಯವಹಾರ ವೈಯಕ್ತಿಕವಾಗಿದ್ದು, ಹಣ ನೀಡದೇ ಮೃತದೇಹವನ್ನು ನೀಡಲು ಆಸ್ಪತ್ರೆ ನಿರಾಕರಿಸಿತ್ತು ಎನ್ನುವ ವರದಿಯನ್ನು ಚರಣ್‌ ನಿರಾಕರಿಸಿದ್ದಾರೆ.

ಇದನ್ನೂ ಒದಿ: 

‘ತಂದೆ ಮೃತಪಟ್ಟು ಕೇವಲ ಮೂರು ದಿನಗಳಾಗಿವೆ. ಇಂಥ ಸಂದರ್ಭದಲ್ಲಿ ನಾನು ತಾಯಿಯನ್ನು ಸಮಾಧಾನಪಡಿಸಲೇ ಅಥವಾ ಇಂಥ ವದಂತಿಗಳಿಗೆ ಸ್ಪಷ್ಟನೆ ನೀಡುತ್ತಾ ಇರಲೇ’ ಎಂದು ಚರಣ್‌ ವದಂತಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. 

‘ಪ್ರತಿ ವಾರ ನಾವು ಬಿಲ್‌ ಪಾವತಿಸುತ್ತಿದ್ದೆವು. ಅದರಲ್ಲಿ ಚಿಕಿತ್ಸೆಯ ಒಂದು ಭಾಗಕ್ಕೆ ವಿಮೆ ಇತ್ತು. ತಂದೆ ಮೃತಪಟ್ಟ ನಂತರ ನಮ್ಮ ಅಕೌಂಟೆಂಟ್‌ ಆಸ್ಪತ್ರೆಯ ಬಳಿ ಬಾಕಿ ಉಳಿದಿರುವ ಬಿಲ್‌ ಕೇಳಿದ್ದರು. ಆದರೆ ಹಣ ತೆಗೆದುಕೊಳ್ಳಲು ಆಸ್ಪತ್ರೆ ಆಡಳಿತ ಮಂಡಳಿ ನಿರಾಕರಿಸಿತ್ತು’ ಎಂದು ಎಂಜಿಎಂ ಹೆಲ್ತ್‌ಕೇರ್‌ ಆಸ್ಪತ್ರೆಯ ವೈದ್ಯರ ಜೊತೆಗೂಡಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು. ಕೋವಿಡ್‌–19 ದೃಢಪಟ್ಟ ಬಳಿಕ ಚಿಕಿತ್ಸೆಗೆ ದಾಖಲಾಗಿದ್ದ ಎಸ್‌ಪಿಬಿ, 52 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. 

ಇದನ್ನೂ ಒದಿ: 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು