ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌: 3 ಗಂಟೆ ಕಾದು, 36 ಭಾರತೀಯ ವಿದ್ಯಾರ್ಥಿಗಳನ್ನು ಕರೆತಂದ ಸ್ಪೈಸ್‌ಜೆಟ್‌

Last Updated 8 ಮಾರ್ಚ್ 2022, 16:00 IST
ಅಕ್ಷರ ಗಾತ್ರ

ನವದೆಹಲಿ: ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತದ 36 ವಿದ್ಯಾರ್ಥಿಗಳನ್ನು ಸ್ಪೈಸ್‌ಜೆಟ್‌ ವಿಮಾನವು ನಿಗದಿತ ಸಮಯಕ್ಕಿಂತ ಸುಮಾರು 3 ಗಂಟೆಗಳ ಕಾಲ ಕಾದು ಕರೆತಂದಿದೆ.

152 ಭಾರತೀಯ ವಿದ್ಯಾರ್ಥಿಗಳಿದ್ದ ಸ್ಪೈಸ್‌ಜೆಟ್‌ ಎಸ್‌ಜಿ 9547 ವಿಮಾನವು ಸೋಮವಾರ ರಾತ್ರಿ 7.30ಕ್ಕೆ ರೊಮೆನಿಯಾದ ಸುಸೆವಾದಿಂದ ಹೊರಡಲು ಸಮಯ ನಿಗದಿಯಾಗಿತ್ತು. 36 ಭಾರತೀಯ ವಿದ್ಯಾರ್ಥಿಗಳು ರೊಮೆನಿಯಾ ಮತ್ತು ಉಕ್ರೇನ್‌ ಗಡಿಯಲ್ಲಿ ಸಿಲುಕಿದ್ದ ಮಾಹಿತಿ ಸಿಗುತ್ತಿದ್ದಂತೆ, ಅವರನ್ನು ಭಾರತಕ್ಕೆ ಕರೆ ತರುವ ನಿಟ್ಟಿನಲ್ಲಿ ಸುಮಾರು 3 ಗಂಟೆಗಳ ಕಾಲ ಕಾಯಲಾಗಿದೆ.

'ರಸ್ತೆಯ ಮೂಲಕ ಸುಸೆವಾದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ 36 ವಿದ್ಯಾರ್ಥಿಗಳನ್ನು ಜೊತೆಯಲ್ಲಿ ಕರೆ ತರುವ ನಿಟ್ಟಿನಲ್ಲಿ ಮೂರು ಬಾರಿ ಹೊರಡುವ ಸಮಯವನ್ನು ಪರಿಷ್ಕರಿಸಲಾಗಿದೆ. ಅಂತಿಮವಾಗಿ ಸ್ಥಳೀಯ ಕಾಲಮಾನ ಸೋಮವಾರ ರಾತ್ರಿ 10.05ಕ್ಕೆ ಸೆಸೆವಾದಿಂದ ವಿಮಾನವು ಹೊರಟಿದೆ. 36 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 188 ವಿದ್ಯಾರ್ಥಿಗಳನ್ನು ದಿಲ್ಲಿಗೆ ಮಂಗಳವಾರ ಬೆಳಿಗ್ಗೆ 8.30ಕ್ಕೆ ಕರೆತರಲಾಗಿದೆ' ಎಂದು ಸ್ಪೈಸ್‌ಜೆಟ್‌ ಪ್ರಕಟಣೆಯಲ್ಲಿ ತಿಳಿಸಿದೆ.

'ಇದುವರೆಗೆ ಬುಡಾಪೆಸ್ಟ್‌, ಕೊಸಿ ಮತ್ತು ಸುಸೆವಾ ಮೂಲಕ ಉಕ್ರೇನ್‌ನಿಂದ ಸುಮಾರು 1,600ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು 'ಆಪರೇಷನ್‌ ಗಂಗಾ' ಯೋಜನೆಯಡಿ ಕರೆತಂದಿದ್ದೇವೆ' ಎಂದು ಸ್ಪೈಸ್‌ಜೆಟ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT