ಕೋವಿಡ್-19 ಲಸಿಕೆ: ಮೊದಲ ಡೋಸ್ ಪಡೆದ ದಲೈಲಾಮಾ

ಧರ್ಮಶಾಲಾ: ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದ ಬೌದ್ಧ ಧರ್ಮಗುರು ದಲೈಲಾಮಾ ಅವರು, ʼಹೆಚ್ಚಿನ ಪ್ರಯೋಜನಕ್ಕಾಗಿʼ ಲಸಿಕೆ ಹಾಕಿಸಿಕೊಳ್ಳುವಂತೆ ಶನಿವಾರ ಜನರಲ್ಲಿ ಮನವಿ ಮಾಡಿದರು.
ʼಗಂಭೀರ ತೊಂದರೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ಈ ಚುಚ್ಚುಮದ್ದು ತುಂಬಾ ಉಪಕಾರಿ ಮತ್ತು ಉತ್ತಮವಾದುದು. ಇತರ ರೋಗಿಗಳೂ ಹೆಚ್ಚಿನ ಪ್ರಯೋಜನಕ್ಕಾಗಿ ಈ ಚುಚ್ಚುಮದ್ದು ಪಡೆಯಬಹುದು. ನಾನು ಅದನ್ನು ತೆಗೆದುಕೊಂಡಿದ್ದೇನೆ. ಜನರು ಈ ಚುಚ್ಚುಮದ್ದು ಹಾಕಿಸಿಕೊಳ್ಳುವ ಧೈರ್ಯ ಮಾಡಬೇಕುʼ ಎಂದು ಕರೆ ನೀಡಿದರು.
86 ವರ್ಷದ ಲಾಮಾ ಅವರು ಕಳೆದ ವರ್ಷ ಜನವರಿಯಿಂದಲೂ ಸ್ವಯಂ ಪ್ರತ್ಯೇಕವಾಸದಲ್ಲಿ ಉಳಿದಿದ್ದರು. ಶನಿವಾರ ತಮ್ಮ ನಿವಾಸದಿಂದ ಹೊರಬಂದು, ಇಲ್ಲಿನ ವಲಯ ಆಸ್ಪತ್ರೆಯಲ್ಲಿ ಬೆಳಗ್ಗೆ 7.10ಕ್ಕೆ ಲಸಿಕೆ ಹಾಕಿಸಿಕೊಂಡರು. ಬಳಿಕ ಸುಮಾರು ಅರ್ಧ ತಾಸು ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿತ್ತು.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಇದುವರೆಗೆ 57,428 ಸೋಂಕಿತರು ಇದುವರೆಗೆ ಗುಣಮುಖರಾಗಿದ್ದು, 997 ಮಂದಿ ಮೃತಪಟ್ಟಿದ್ದಾರೆ. ಇನ್ನೂ 589 ಕೋವಿಡ್-19 ಸಕ್ರಿಯ ಪ್ರಕರಣಗಳು ಇವೆ.
Himachal Pradesh: #DalaiLama took his first shot of the #COVID19 vaccine at Zonal Hospital Dharamshala, this morning. pic.twitter.com/yczUBKodwi
— IFE News Agency (@IFENewsAgency) March 6, 2021
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.