ಶುಕ್ರವಾರ, ಮಾರ್ಚ್ 24, 2023
22 °C
ಡಾ. ರೆಡ್ಡೀಸ್ ಲ್ಯಾಬ್ ಜತೆ ಸಹಿ, ಪ್ರಾಯೋಗಿಕ ಪರೀಕ್ಷೆ ಬಳಿಕ ಮಾರಾಟ

ಭಾರತದಲ್ಲಿ ರಷ್ಯಾದ ಲಸಿಕೆ ಮಾರಾಟಕ್ಕೆ ಒಪ್ಪಂದ: 10 ಕೋಟಿ ಡೋಸ್‌ ಲಸಿಕೆ ತಯಾರಿಕೆ;

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್/ನವದಹಲಿ: ವಿಶ್ವದ ಮೊದಲ ನೋಂದಾಯಿತ ಕೋವಿಡ್ ಲಸಿಕೆ ‘ಸ್ಪುಟ್ನಿಕ್–ವಿ’ ಅನ್ನು ಭಾರತದಲ್ಲಿ ಪರೀಕ್ಷೆಗೆ ಒಳಪಡಿಸಲು ಹಾಗೂ ಮಾರಾಟ ಮಾಡಲು ದೇಶದ ಪ್ರಮುಖ ಔಷಧ ತಯಾರಿಕಾ ಕಂಪನಿ ಹೈದರಾಬಾದ್‌ನ ಡಾ. ರೆಡ್ಡೀಸ್ ಲ್ಯಾಬೊರೇಟರಿ ಜತೆ ರಷ್ಯಾ ಒಪ್ಪಂದ ಮಾಡಿಕೊಂಡಿದೆ. 

ಒಪ್ಪಂದದ ಪ್ರಕಾರ, ರೆಡ್ಡಿ ಲ್ಯಾಬ್‌ಗೆ 10 ಕೋಟಿ ಡೋಸ್‌‌ಗಳು ರಷ್ಯಾದಿಂದ ರವಾನೆಯಾಗಲಿವೆ. ಭಾರತದಲ್ಲಿ ಲಸಿಕೆಯ ಮೂರು ಹಂತದ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿದೆ. ಪರೀಕ್ಷೆಯಲ್ಲಿ ಯಶಸ್ಸು ಕಂಡುಬಂದರೆ ಲಸಿಕೆಯನ್ನು ಲ್ಯಾಬ್ ಮಾರಾಟ ಮಾಡಲಿದೆ. ಭಾರತದ ಔಷಧ ನಿಯಂತ್ರಣ ಪ್ರಾಧಿಕಾರದಿಂದ ಇದಕ್ಕೆ ಇನ್ನಷ್ಟೇ ಅನುಮತಿ ಪತ್ರ ಸಿಗಬೇಕಿದೆ. ‘ಮೊದಲ ಹಾಗೂ ಎರಡನೇ ಹಂತದ ಪರೀಕ್ಷೆಗಳು ಭರವಸೆಯ ಫಲಿತಾಂಶ ನೀಡಿವೆ’ ಎಂದು ಲ್ಯಾಬ್‌ನ ಎಂ.ಡಿ ಹಾಗೂ ಸಹ ಅಧ್ಯಕ್ಷ ಜಿ.ವಿ. ಪ್ರಸಾದ್ ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು