ಸೋಮವಾರ, ಮಾರ್ಚ್ 27, 2023
24 °C

ಪೊಲೀಸ್‌: ಮಹಿಳಾ ಪ್ರಾತಿನಿಧ್ಯ ಶೇ 33ಕ್ಕೆ ಹೆಚ್ಚಿಸಲು ರಾಜ್ಯಗಳಿಗೆ ಸಲಹೆ- ಕೇಂದ್ರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಪೊಲೀಸ್‌ ಪಡೆಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಶೇ 33ಕ್ಕೆ ಏರಿಸಬೇಕು ಎಂದು ರಾಜ್ಯಗಳಿಗೆ ಕೇಂದ್ರವು ಆರು ಬಾರಿ ಸಲಹೆ ನೀಡಿದೆ. ಆದರೆ, 2022 ಜ.1ರ ಮಾಹಿತಿ ಪ್ರಕಾರ ಮಹಿಳಾ ಪ್ರಾತಿನಿಧ್ಯವು ಶೇ 11.75ರಷ್ಟು ಮಾತ್ರ ಇದೆ’ ಎಂದು ಗೃಹ ಖಾತೆ ಸಚಿವ ನಿತ್ಯಾನಂದ ರೈ ಅವರು ರಾಜ್ಯಸಭೆಗೆ ಬುಧವಾರ ಮಾಹಿತಿ ನೀಡಿದರು.

‘ಖಾಲಿ ಇರುವ ಕಾನ್‌ಸ್ಟೇಬಲ್‌ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗಳನ್ನು ಹೆಚ್ಚುವರಿ ಮಹಿಳಾ ಕಾನ್‌ಸ್ಟೇಬಲ್‌ ಮತ್ತು ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗಳಾಗಿ ಪರಿವರ್ತಿಸಿ ಎಂದು ಎಲ್ಲ ರಾಜ್ಯ ಸರ್ಕಾರಗಳಿಗೂ ಮನವಿ ಮಾಡಲಾಗಿದೆ’ ಎಂದರು.

‘ದೇಶದ ಪ್ರತಿ ಪೊಲೀಸ್‌ ಠಾಣೆಗಳಲ್ಲೂ ಕನಿಷ್ಠ ಮೂವರು ಮಹಿಳಾ ಸಬ್‌ಇನ್‌ಸ್ಪೆಕ್ಟರ್‌ ಹಾಗೂ 10 ಮಂದಿ ಮಹಿಳಾ ಕಾನ್‌ಸ್ಟೇಬಲ್‌ಗಳು ಇರಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಈ ಮೂಲಕ 24X7 ಮಹಿಳಾ ಸಹಾಯವಾಣಿ ಕಾರ್ಯನಿರ್ವಹಿಸುವಂತೆ ಆಗಬೇಕು’ ಎಂದರು.

‘ಲಡಾಖ್‌ನಲ್ಲಿ ಮಹಿಳಾ ಪ್ರಾತಿನಿಧ್ಯವು ಅತಿಹೆಚ್ಚು, ಅಂದರೆ ಶೇ 28.3ರಷ್ಟಿದೆ. ಆಂಧ್ರ ಪ್ರದೇಶದಲ್ಲಿ ಶೇ 21.7, ಛತ್ತೀಸಗಢದಲ್ಲಿ ಶೇ 21.6 ಹಾಗೂ ಬಿಹಾರದಲ್ಲಿ ಶೇ 21.2ರಷ್ಟಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ (ಶೇ 3.2) ಅತಿಕಡಿಮೆ ಮಹಿಳಾ ಪ್ರಾತಿನಿಧ್ಯವಿದೆ. ತ್ರಿಪುರಾದಲ್ಲಿ ಶೇ 5.29 ಹಾಗೂ ಮೇಘಾಲಯದಲ್ಲಿ ಶೇ 5.9ರಷ್ಟಿದೆ ಎಂದು ಪೊಲೀಸ್‌ ಸಂಶೋಧನೆ ಹಾಗೂ ಅಭಿವೃದ್ಧಿ ಬ್ಯುರೊ ಈ ಅಂಕಿ ಸಂಖ್ಯೆಯನ್ನು ನೀಡಿದೆ’ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು