ಬುಧವಾರ, ಸೆಪ್ಟೆಂಬರ್ 29, 2021
20 °C

ಕೋವಿಡ್ ಲಸಿಕೆ ಪಡೆದ ನಾಲ್ಕೇ ತಿಂಗಳಿಗೆ ಪ್ರತಿಕಾಯ ಕುಸಿತ: ಅಧ್ಯಯನ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದ ನಾಲ್ಕೇ ತಿಂಗಳಲ್ಲಿ ಪ್ರತಿಕಾಯಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿದಿರುವುದು ಅಧ್ಯಯನದ ಮೂಲಕ ತಿಳಿದುಬಂದಿದೆ.

ಲಸಿಕೆಯ ಮೊದಲ ಡೋಸ್ ಪಡೆದ 614 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಲಸಿಕೆ ಪಡೆದ ನಾಲ್ಕು ತಿಂಗಳ ಬಳಿಕ ಅವರಲ್ಲಿ ಕೋವಿಡ್ ವಿರುದ್ಧ ಹೋರಾಡುವ ಪ್ರತಿಕಾಯಗಳಲ್ಲಿ ‘ಗಮನಾರ್ಹ’ಕುಸಿತ ಕಂಡುಬಂದಿದೆ.

ಈ ಮೂಲಕ, ಕೆಲವು ಪಾಶ್ಚಿಮಾತ್ಯ ದೇಶಗಳು ಮಾಡಿದಂತೆ ಬೂಸ್ಟರ್ ಡೋಸ್‌ಗಳನ್ನು ನೀಡಬೇಕೆ ಎಂದು ಕೇಂದ್ರ ಸರ್ಕಾರ ನಿರ್ಧರಿಸಲು ಈ ಸಂಶೋಧನೆ ಸಹಾಯ ಮಾಡಬಹುದು ಎನ್ನಲಾಗಿದೆ.

ಪ್ರತಿಕಾಯಗಳು ಕಡಿಮೆಯಾಗುವುದು ಎಂದರೆ ರೋಗನಿರೋಧಕ ಶಕ್ತಿ ಹೊಂದಿರುವ ಜನರು ರೋಗವನ್ನು ಎದುರಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎಂದರ್ಥವಲ್ಲ, ಏಕೆಂದರೆ, ದೇಹದ ಸ್ಮರಣ ಕೋಶಗಳು ರೋಗದ ವಿರುದ್ಧ ಗಣನೀಯ ರಕ್ಷಣೆ ನೀಡಲು ಮುಂದಾಗಬಹುದು ಎಂದು ಅಧ್ಯಯನ ನಡೆಸಿದ ಭುವನೇಶ್ವರದ ಸರ್ಕಾರಿ ಸಂಸ್ಥೆಯ ನಿರ್ದೇಶಕರು ಹೇಳಿದ್ದಾರೆ.

‘ಆರು ತಿಂಗಳ ನಂತರ, ಬೂಸ್ಟರ್ ಡೋಸ್ ಅಗತ್ಯವಿದೆಯೇ ಮತ್ತು ಯಾವಾಗ ಅಗತ್ಯವಿದೆ? ಎಂದು ಹೆಚ್ಚು ಸ್ಪಷ್ಟವಾಗಿ ಹೇಳಲು ಸಾಧ್ಯವಾಗುತ್ತದೆ’ ಎಂದು ಭುವನೇಶ್ವರ ಮೂಲದ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದ ಅಧ್ಯಯನಕಾರ ಸಂಘಮಿತ್ರ ಪತಿ ಮಂಗಳವಾರ ರಾಯಿಟರ್ಸ್‌ಗೆ ತಿಳಿಸಿದರು.

‘ಪ್ಯಾನ್ ಇಂಡಿಯಾ ಡೇಟಾಕ್ಕಾಗಿ ನಾವು ದೇಶ ವಿವಿಧ ಪ್ರದೇಶಗಳಲ್ಲಿ ಇದೇ ರೀತಿಯ ಅಧ್ಯಯನಗಳನ್ನು ನಡೆಸಲು ಒತ್ತಾಯಿಸುತ್ತೇವೆ’ ಎಂದು ಅವರು ಹೇಳಿದರು.

ಫೈಜರ್ ಅಂಡ್ ಬಯೋಟೆಕ್ ಮತ್ತು ಅಸ್ಟ್ರಾಜೆನೆಕಾ ಲಸಿಕೆಗಳ ಎರಡು ಡೋಸ್ ನೀಡುವ ರಕ್ಷಣೆ ಆರು ತಿಂಗಳ ಬಳಿಕ ಮಸುಕಾಗಲು ಆರಂಭವಾಗುತ್ತದೆ ಎಂದು ಬ್ರಿಟಿಷ್ ಸಂಶೋಧಕರು ಕಳೆದ ತಿಂಗಳು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು