ಅಫ್ಗಾನಿಸ್ತಾನದಲ್ಲಿ ಪುಲ್ವಾಮ ಮಾದರಿಯ ದಾಳಿ: 26 ಸೈನಿಕರ ಸಾವು

ಘಜ್ನಿ: ಅಫ್ಗಾನಿಸ್ತಾನದಲ್ಲಿ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಕಾರುಬಾಂಬ್ ಅನ್ನು ಸ್ಫೋಟಿಸಲಾಗಿದೆ. ಘಟನೆಯಲ್ಲಿ ಕನಿಷ್ಠ 26 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಫ್ಗಾನಿಸ್ತಾನದಲ್ಲಿ ಭದ್ರತಾಪಡೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಅತಿ ದೊಡ್ಡ ದಾಳಿ ಇದಾಗಿದೆ.
ಪೂರ್ವ ಅಫ್ಗಾನಿಸ್ತಾನದ ಘಜ್ನಿಯಲ್ಲಿ ಈ ದಾಳಿ ಸಂಭವಿಸಿದ್ದು, ಈ ಪ್ರದೇಶದಲ್ಲಿ ತಾಲಿಬಾನ್ ಉಗ್ರ ಪಡೆಗಳು ಮತ್ತು ಸೇನೆ ನಡುವೆ ನಿರಂತರವಾಗಿ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ.
'ಈ ವರೆಗೆ 26 ಶವಗಳು ಸಿಕ್ಕಿವೆ. ಘಟನೆಯಲ್ಲಿ 17 ಮಂದಿ ಗಾಯಗೊಂಡಿದ್ದಾರೆ. ಅವರೆಲ್ಲರೂ ಭದ್ರತಾ ಸಿಬ್ಬಂದಿ' ಎಂದು ಘಜ್ನಿ ಆಸ್ಪತ್ರೆಯ ನಿರ್ದೇಶಕ ಬಾಜ್ ಮೊಹಮ್ಮದ್ ಹೆಮ್ಮತ್ ಸುದ್ದಿ ಸಂಸ್ಥೆ ಎಎಫ್ಪಿಗೆ ತಿಳಿಸಿದ್ದಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.