ಬುಧವಾರ, ಸೆಪ್ಟೆಂಬರ್ 22, 2021
22 °C

ಸುಶಾಂತ್ ರಜಪೂತ್ ಅಲ್ಲ,ರಜಪೂತರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ: ಆರ್‌ಜೆಡಿ ಶಾಸಕ

ಪಿಟಿಐ Updated:

ಅಕ್ಷರ ಗಾತ್ರ : | |

Sushant

ಪಟನಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್, ರಜಪೂತ್ ಅಲ್ಲ. ಮಹಾರಾಣಾ ಪ್ರತಾಪ್‌ ಕುಲಕ್ಕೆ ಸೇರಿದವರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ಆರ್‌ಜೆಡಿ ಶಾಸಕ ಅರುಣ್ ಯಾದವ್ ಹೇಳಿದ್ದಾರೆ. 

ಈ ರೀತಿ ಜಾತಿ ಉಲ್ಲೇಖಿಸಿ ಹೇಳಿಕೆ ನೀಡಿದ ಅರುಣ್ ಬಿಹಾರದ ಜನತೆ ಮತ್ತು ಸುಶಾಂತ್ ಅಭಿಮಾನಿಗಳ ಕ್ಷಮೆ ಕೇಳಬೇಕು ಎಂದು ಜೆಡಿಯು ಮತ್ತು ಬಿಜೆಪಿ ಒತ್ತಾಯಿಸಿದೆ.

ಬುಧವಾರ ಸಹರ್‌ಸಾದಲ್ಲಿ  ನೂತನ ರಸ್ತೆಯೊಂದನ್ನು ಉದ್ಘಾಟಿಸಿ ಮಾತನಾಡಿದ ಅರುಣ್ ಯಾದವ್, 'ಸುಶಾಂತ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು. ನನಗೆ ತುಂಬಾ ನೋವಾಗಿದೆ. ಅವನೊಬ್ಬ ರಜಪೂತ್. ಹೋರಾಟ ಮಾಡಬೇಕಿತ್ತು. ರಜಪೂತರು ಸಾಯುವುದಕ್ಕಿಂತ ಮುನ್ನ ಇನ್ನೊಬ್ಬರನ್ನು ಸಾಯಿಸುತ್ತಾರೆ. ಮಹಾರಾಣಾ ಪ್ರತಾಪ್ ರಜಪೂತರ ಪೂರ್ವಜ ಮಾತ್ರವಲ್ಲ ಯಾದವ್ ಜಾತಿಯ ಪೂರ್ವಜರಾಗಿದ್ದಾರೆ' ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು