ಬುಧವಾರ, ಅಕ್ಟೋಬರ್ 21, 2020
22 °C

ಸುಶಾಂತ್ ಪ್ರಕರಣ:‌ ರಿಯಾ ಚಕ್ರವರ್ತಿ ವಿಚಾರಣೆ ನಡೆಸಿದ ಸಿಬಿಐ

ಪಿಟಿಐ Updated:

ಅಕ್ಷರ ಗಾತ್ರ : | |

ರಿಯಾ ಚಕ್ರವರ್ತಿ

ಮುಂಬೈ: ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇದೇ ಮೊದಲ ಬಾರಿಗೆ ನಟಿ ರಿಯಾ ಚಕ್ರವರ್ತಿ ಅವರ ವಿಚಾರಣೆಯನ್ನು ಶುಕ್ರವಾರ ನಡೆಸಿದೆ.

ಪ್ರಕರಣದ ವಿಚಾರಣೆ ನಡೆಸಲು ಡಿಆರ್‌ಡಿಒ ಅತಿಥಿ ಗೃಹಕ್ಕೆ ಬೆಳಿಗ್ಗೆ 10.30ರ ಒಳಗೆ ಹಾಜರಾಗುವಂತೆ ರಿಯಾ ಚಕ್ರವರ್ತಿಗೆ ಸಮನ್ಸ್‌ ನೀಡಲಾಗಿತ್ತು. ಇದೇ ಸಂದರ್ಭದಲ್ಲಿ, ಸುಶಾಂತ್‌ ಸ್ನೇಹಿತ ಸಿದ್ಧಾರ್ಥ್‌ ಪಿಠಾಣಿ, ಅಡುಗೆ ಕೆಲಸಕ್ಕಿದ್ದ ನೀರಜ್‌ ಸಿಂಗ್‌ ಅವರ ವಿಚಾರಣೆಯನ್ನು ನಡೆಸಲಾಗಿದೆ.

ಪ್ರಕರಣದ ತನಿಖೆಗಾಗಿ ನಗರಕ್ಕೆ ಬಂದಿರುವ ಸಿಬಿಐ ತಂಡ ಸಾಂತಾಕ್ರೂಸ್‌ನಲ್ಲಿ ಇರುವ ಡಿಆರ್‌ಡಿಒ ಅತಿಥಿ ಗೃಹದಲ್ಲಿ ಎಂಟು ದಿನಗಳಿಂದ ಉಳಿದುಕೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು