ಬುಧವಾರ, ಅಕ್ಟೋಬರ್ 28, 2020
24 °C

ಸಾಯುವ ಮುನ್ನ ಪೊಲೀಸರಿಗೆ ಕರೆ ಮಾಡಿದ್ದ ದಿಶಾ ಸಾಲಿಯನ್: ಬಿಜೆಪಿ ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದಿಶಾ ಸಾಲಿಯನ್ ಸಾಯುವ ಮುನ್ನ ಮುಂಬೈ ಪೊಲೀಸರ ‘100’ ಸಂಖ್ಯೆಗೆ ಕರೆ ಮಾಡಿದ್ದರು ಎಂದು ಬಿಜೆಪಿ ಶಾಸಕ ನಿತೇಶ್ ರಾಣೆ ತಿಳಿಸಿದ್ದಾರೆ. 

ದಿಶಾ ಅವರು ನಟ ಸುಶಾಂತ್‌ ಸಿಂಗ್‌ ರಜಪೂತ್ ಸೇರಿದ್ದಂತೆ ಸಿನಿಮಾ ನಟ–ನಟಿಯರಿಗೆ ಸೆಲೆಬ್ರಿಟಿ ಟ್ಯಾಲೆಂಟ್ ಮ್ಯಾನೇಜರ್ ಆಗಿದ್ದರು. 

‘ಮುಂಬೈ ಪೊಲೀಸರು ಪ್ರಕರಣದ ತನಿಖೆಯನ್ನು ಸಮರ್ಥವಾಗಿ ನಡೆಸಿಲ್ಲ. ದಿಶಾ ಅವರು ಪಾರ್ಟಿ ಮುಗಿಸಿಕೊಂಡು ಹೋಗುವ ಸಂದರ್ಭದಲ್ಲಿ ಪೊಲೀಸರಿಗೆ ಮತ್ತು ಗೆಳೆಯ ರೋಹನ್‌ ರೈಗೆ ಕರೆ ಮಾಡಿದ್ದರು’ ಎಂದು ಶಾಸಕರು ಹೇಳಿದ್ದಾರೆ. 

‘ಜುಹುವಿನಲ್ಲಿ ನಡೆದ ಪಾರ್ಟಿಯಲ್ಲಿ ತನಗಾದ ಸಮಸ್ಯೆಯ ಕುರಿತು ದಿಶಾ ಪೊಲೀಸರಿಗೆ ವಿವರಿಸಿದ್ದರು. ಇದೇ ವೇಳೆ ನಟ ಸುಶಾಂತ್‌ಗೂ ಕರೆ ಮಾಡಿ ಘಟನೆ ಬಗ್ಗೆ ಹೇಳಿದ್ದಾರೆ. ಸುಶಾಂತ್‌ ಈ ವಿಷಯವನ್ನು ರಿಯಾ ಬಳಿ ತಿಳಿಸಿದ್ದಾರೆ. ರಿಯಾ ಮಲಾದ್‌ನಲ್ಲಿದ್ದವರಿಗೆ ಈ ಸಂಬಂಧ ಮಾಹಿತಿ ನೀಡಿದ್ದಾರೆ. ದಿಶಾ ಮತ್ತು ಸುಶಾಂತ್‌ ಎರಡೂ ಸಾವಿನ ನಡುವೆ ಸಂಬಂಧವಿರುವ ಸಾಧ್ಯತೆ ಇದೆ’ ಎಂದು ಅವರು ದೂರಿದ್ದಾರೆ. 

100ಕ್ಕೆ ಬರುವ ಪ್ರತಿ ಕರೆಯ ರೆಕಾರ್ಡ್‌ ಮಾಡಲಾಗುತ್ತದೆ. ಈ ಸಂಬಂಧ ಸಿಬಿಐ ತನಿಖೆ ನಡೆಸಬೇಕು ಎಂದು ಅವರು ಹೇಳಿದ್ದಾರೆ.

ಜೂನ್‌ 8ರಂದು ಮುಂಬೈನ ಮಲಾದ್ ಉಪನಗರದ ಅಪಾರ್ಟ್‌ವೊಂದರ 12ನೇ ಮಹಡಿಯಿಂದ ಜಿಗಿದು ದಿಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು