ಗುರುವಾರ , ಅಕ್ಟೋಬರ್ 22, 2020
21 °C
ಏಮ್ಸ್‌ನ ವಿಧಿವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಸುಧೀರ್‌ ಗುಪ್ತಾ ಹೇಳಿಕೆ

ಸುಶಾಂತ್‌ ಸಿಂಗ್‌ ಸಾವು ಪ್ರಕರಣ: ಕೊಲೆಯಲ್ಲ, ಆತ್ಮಹತ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವು ಕೊಲೆಯಲ್ಲ. ಅದು ನೇಣು ಹಾಕಿಕೊಂಡ ಪ್ರಕರಣ ಹಾಗೂ ಆತ್ಮಹತ್ಯೆಯಿಂದಲೇ ಸಾವು ಸಂಭವಿಸಿದೆ’ ಎಂದು ಏಮ್ಸ್‌ನ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಸುಧೀರ್‌ ಗುಪ್ತಾ ಶನಿವಾರ ತಿಳಿಸಿದರು. 

‘ವಿಷ ನೀಡಿ ಮತ್ತು ಕತ್ತು ಹಿಸುಕಿ ಕೊಲೆ’ ಎನ್ನುವುದನ್ನು ಆರು ಸದಸ್ಯರ ವಿಧಿವಿಜ್ಞಾನ ವೈದ್ಯರಿರುವ ತಂಡ ತಳ್ಳಿಹಾಕಿದೆ. ಈ ಮಾಹಿತಿಯನ್ನು ಸಿಬಿಐ ಎದುರಿಗೆ ವರದಿ ಮುಖಾಂತರ ಏಮ್ಸ್‌ನ ವೈದ್ಯಕೀಯ ತಂಡವು ಇರಿಸಿದೆ. 

‘ಇದು ನೇಣು ಹಾಕಿಕೊಂಡ ಪ್ರಕರಣ ಹಾಗೂ ಆತ್ಮಹತ್ಯೆಯಿಂದಲೇ ಸಾವು ಸಂಭವಿಸಿದೆ. ನಮ್ಮ ಅಂತಿಮ ವರದಿಯನ್ನು ನಾವು ಸಿಬಿಐಗೆ ಸಲ್ಲಿಸಿದ್ದೇವೆ. ನೇಣು ಹಾಕಿಕೊಂಡಿರುವುದರ ಗುರುತು ಹೊರತಾಗಿ ದೇಹದಲ್ಲಿ ಯಾವುದೇ ಗಾಯದ ಗುರುತು ಇರಲಿಲ್ಲ’ ಎಂದ ಡಾ. ಗುಪ್ತಾ, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.

ಜೂ.14ರಂದು ಮುಂಬೈನ ಬಾಂದ್ರಾದಲ್ಲಿ ಇರುವ ತಮ್ಮ ಅಪಾರ್ಟ್‌ಮೆಂಟ್‌ ವಸತಿ ಸಮುಚ್ಚಯದಲ್ಲಿ ಸುಶಾಂತ್‌ ಸಿಂಗ್ ಮೃತದೇಹ ಪತ್ತೆಯಾಗಿತ್ತು. ನಟಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಕುಟುಂಬದ ವಿರುದ್ಧ ಸುಶಾಂತ್‌ ಸಿಂಗ್‌ ತಂದೆ ಕೆ.ಕೆ.ಸಿಂಗ್‌ ಅವರು ನೀಡಿದ್ದ ದೂರು ಆಧರಿಸಿ ಬಿಹಾರ ಪೊಲೀಸರು ತನಿಖೆ ನಡೆಸುತ್ತಿದ್ದರು. ನಂತರದಲ್ಲಿ ಈ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು