ಮುಂಬೈ: ‘ಸುಶಾಂತ್ ಸಿಂಗ್ ಮೃತದೇಹವನ್ನು ಆಸ್ಪತ್ರೆಗೆ ಕರೆತಂದ ಸಂದರ್ಭದಲ್ಲಿ ಅವರ ಒಂದು ಕಾಲು ಮುರಿದಿತ್ತು ಹಾಗೂ ತಿರುಚಿತ್ತು. ಮೃತದೇಹವನ್ನು ಪರಿಶೀಲಿಸಿದ್ದ ಹಿರಿಯ ವೈದ್ಯರು ದೇಹದಲ್ಲಿರುವ ಗಾಯದ ಗುರುತುಗಳನ್ನು ನೋಡಿ ಇದು ಕೊಲೆ ಎಂದು ಸ್ಪಷ್ಟವಾಗಿ ಹೇಳಿದ್ದರು, ಆದರೆ ಪೊಲೀಸರು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದರು...’

ಹೀಗೆಂದು ಸುಶಾಂತ್ ಮೃತದೇಹವಿದ್ದ ಕೂಪರ್ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ‘ನ್ಯೂಸ್ ನೇಷನ್’ಗೆ ನೀಡಿದ ಸಂದರ್ಶನದ ತುಣುಕೊಂದನ್ನು ಸುಶಾಂತ್ ಸಿಂಗ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

‘ಅಯ್ಯೊ ದೇವರೇ, ಈ ಸುದ್ದಿಯನ್ನು ಕೇಳುವಾಗ ನನ್ನ ಹೃದಯ ಚೂರಾಗುತ್ತದೆ. ನನ್ನ ಸಹೋದರನಿಗೆ ಅವರು ಏನೇನು ಮಾಡಿದ್ದಾರೊ.. ತಪ್ಪಿತಸ್ಥರನ್ನು ಶೀಘ್ರವೇ ಬಂಧಿಸಿ’ ಎಂದು ಟ್ವಿಟರ್‌ನಲ್ಲಿ ಶ್ವೇತಾ ಸಿಂಗ್ ಬರೆದಿದ್ದಾರೆ.

ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಶಾಂತ್ ಗೆಳತಿ, ನಟಿ ರಿಯಾ ಚಕ್ರವರ್ತಿಯನ್ನು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯವು (ಇ.ಡಿ) ವಿಚಾರಣೆ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.