ಶುಕ್ರವಾರ, ಸೆಪ್ಟೆಂಬರ್ 24, 2021
21 °C

ʼಅಫ್ಗಾನಿಸ್ತಾನದ ಸ್ವಾತಂತ್ರ್ಯಕ್ಕಾಗಿ ತಾಲಿಬಾನ್‌ ಹೋರಾಟʼ ಎಂದ ಎಸ್‌ಪಿ ಸಂಸದ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಲಖನೌ: ‌ಅಫ್ಗಾನಿಸ್ತಾನವನ್ನು ತನ್ನ ಹಿಡಿತಕ್ಕೆ ಪಡೆದಿರುವ ತಾಲಿಬಾನ್ ಸಂಘಟನೆಯನ್ನು ಉತ್ತರ ಪ್ರದೇಶದ ಸಂಸದ ಶಫಿಕುರ್‌ ರಹಮಾನ್‌ ಬರ್ಗ್ ಬೆಂಬಲಿಸಿದ್ದಾರೆ. ಸಂಭಾಲ್‌‌ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸದ ಬರ್ಗ್, ʼತಾಲಿಬಾನ್‌ ಹೋರಾಟ ಆ ದೇಶ ಮತ್ತು ಆಫ್ಗನ್ನರ ಸ್ವಾತಂತ್ರ್ಯಕ್ಕಾಗಿʼ ಎಂದು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ʼಭಾರತದಲ್ಲಿ ಬ್ರಿಟೀಷರ ಅಡಳಿತವಿದ್ದಾಗ, ನಮ್ಮ ದೇಶ ಸ್ವಾತಂತ್ಯ್ರಕ್ಕಾಗಿ ಹೋರಾಟ ನಡೆಸಿತ್ತು. ಈಗ ತಾಲಿಬಾನ್‌, ತಮ್ಮ ದೇಶವನ್ನು ಸ್ವತಂತ್ರಗೊಳಿಸಲು ಮತ್ತು ಮುನ್ನಡೆಸಲು ಬಯಸುತ್ತಿದೆ. ಬಲಿಷ್ಠ ಶಕ್ತಿಯಾಗಿರುವ ತಾಲಿಬಾನ್‌, ರಷ್ಯಾ ಮತ್ತು ಅಮೆರಿಕದಂತಹ ಪ್ರಬಲ ದೇಶಗಳು ಅಫ್ಗಾನ್‌ನಲ್ಲಿ ನೆಲೆಗೊಳ್ಳಲು ಅವಕಾಶ ನೀಡಲಿಲ್ಲʼ ಎಂದು ಶ್ಲಾಘಿಸಿದ್ದಾರೆ.

ಮುಂದುವರಿದು, ʼಅಫ್ಗಾನಿಸ್ತಾನ ಸ್ವಾಂತಂತ್ರ್ಯವು ಆ ದೇಶದ ಆಂತರಿಕ ವಿಚಾರ. ಅಮೆರಿಕ ಏಕೆ ಅಫ್ಗಾನಿಸ್ತಾನದಲ್ಲಿ ಆಡಳಿತ ನಡೆಸಬೇಕು? ತಾಲಿಬಾನ್‌ ಅಲ್ಲಿ ಒಂದು ಶಕ್ತಿಯಾಗಿದೆ ಮತ್ತು ಆಫ್ಗನ್ನರು ಅದರ ನೇತೃತ್ವದಲ್ಲಿ ಸ್ವತಂತ್ರರಾಗಲು ಬಯಸುತ್ತಿದ್ದಾರೆʼ ಎಂದಿದ್ದಾರೆ.

ಬರ್ಗ್‌ ಹೇಳಿಕೆಯನ್ನು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೆ.ಪಿ.ಮೌರ್ಯ ಖಂಡಿಸಿದ್ದು, ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ಎಸ್‌ಪಿ ನಾಯಕರ ನಡುವೆ ಯಾವುದೇ ವ್ಯತ್ಯಾಸಗಳಿಲ್ಲ ಎಂದು ಟೀಕಿಸಿದ್ದಾರೆ.

ʼಸಮಾಜವಾದಿ ಪಕ್ಷದವರು ಏನು ಬೇಕಾದರೂ ಹೇಳುತ್ತಾರೆ. ತಾಲಿಬಾನ್‌ ಬಗ್ಗೆ ಎಸ್‌ಪಿ ಇಂತಹ ಹೇಳಿಕೆ ನೀಡಬಹುದಾದರೆ, ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ಎಸ್‌ಪಿ ನಾಯಕರ ನಡುವೆ ವ್ಯತ್ಯಾಸವೇನಿದೆ?ʼ ಎಂದು ಪ್ರಶ್ನಿಸಿದ್ದಾರೆ.

ಭಾನುವಾರ ಕಾಬೂಲ್‌ ಪ್ರವೇಶಿಸಿರುವ ತಾಲಿಬಾನ್‌, ಅಧ್ಯಕ್ಷರ ಅರಮನೆಯನ್ನು ವಶಕ್ಕೆ ಪಡೆದಿದೆ. ಇದೀಗ ತಾಲಿಬಾನ್‌ ನಾಯಕರು ಅಫ್ಗಾನಿಸ್ತಾನ ಅಡಳಿತದ ಬಗ್ಗೆ ಚರ್ಚೆ ಆರಂಭಿಸಿದ್ದಾರೆ ಎಂದು ವರದಿಯಾಗಿವೆ. 

ಇವನ್ನೂ ಓದಿ
ಅಫ್ಗನ್‌ನಲ್ಲಿ 20 ವರ್ಷಗಳ ಸುದೀರ್ಘ ರಕ್ತಸಿಕ್ತ ಅಧ್ಯಾಯ ಅಂತ್ಯಕ್ಕೆ ಬದ್ಧ: ಬೈಡನ್
ಅಫ್ಗಾನಿಸ್ತಾನದಲ್ಲಿ ಅಮೆರಿಕದ ಪಾತ್ರವೇನು? ಇಲ್ಲಿದೆ 20 ವರ್ಷಗಳ ‘ರಕ್ತ ಚರಿತ್ರೆ’
​* 

​* 

​* 

​* 
*​ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು