ಬುಧವಾರ, ಏಪ್ರಿಲ್ 14, 2021
28 °C

ತಮಿಳುನಾಡು: ಸವಾಲಿನ ಸುಳಿಯಲ್ಲಿ ಎಐಎಡಿಎಂಕೆ

ಇ.ಟಿ.ಬಿ. ಶಿವಪ್ರಿಯನ್‌ Updated:

ಅಕ್ಷರ ಗಾತ್ರ : | |

ಚೆನ್ನೈ: ತಮಿಳುನಾಡು ರಾಜಕಾರಣದ ಇಬ್ಬರು ದೈತ್ಯರಾದ ಎಂ.ಕರುಣಾನಿಧಿ ಮತ್ತು ಜೆ.ಜಯಲಲಿತಾ ಅವರಿಲ್ಲದೆ ರಾಜ್ಯವು ಎದುರಿಸುತ್ತಿರುವ ಮೊದಲ ಚುನಾವಣೆ ಇದು. ಹಾಗಾಗಿಯೇ ರಾಜ್ಯದಲ್ಲಿ ಹೊಸ ನಾಯಕರು ಉದಯವಾಗಲು ಈ ಚುನಾವಣೆ ಕಾರಣವಾಗಲಿದೆ. 

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಪ್ರಮುಖ ಪಕ್ಷವಾಗಿರಲೇ ಇಲ್ಲ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಹಲವು ಸಮಾನ ಮನಸ್ಕ ಪಕ್ಷಗಳನ್ನು ಒಟ್ಟುಗೂಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಈಗ ಎಐಎಡಿಎಂಕೆಯ ಮಿತ್ರಪಕ್ಷಗಳಲ್ಲಿ ಬಿಜೆಪಿ ಒಂದಾಗಿದೆಯಷ್ಟೆ. ಕೇವಲ 25-30 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ, ಬಿಜೆಪಿ ಮೈತ್ರಿಯಲ್ಲಿ ನಿರ್ಣಾಯಕ ಸ್ಥಾನದಲ್ಲಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 39 ಕ್ಷೇತ್ರಗಳ ಪೈಕಿ 38 ಕ್ಷೇತ್ರಗಳನ್ನು ಡಿಎಂಕೆ ಗೆದ್ದುಕೊಂಡಿತ್ತು. 2019ರಲ್ಲಿ ಹಲವು ಪಕ್ಷಗಳು ಪೈಪೋಟಿಯಲ್ಲಿದ್ದವು. ಈಗಲೂ ಪರಿಸ್ಥಿತಿ ಹಾಗೇ ಇದೆ. ಹಲವು ಪಕ್ಷಗಳು ಕಣದಲ್ಲಿ ಇದ್ದರೂ, ಡಿಎಂಕೆ ಮತ್ತು ಎಐಎಡಿಎಂಕೆ ಮಧ್ಯೆ ಪ್ರಬಲ ಪೈಪೋಟಿ ಇದೆ. ಡಿಎಂಕೆಯು ಕಾಂಗ್ರೆಸ್, ಎಡಪಕ್ಷಗಳು, ವಿಸಿಕೆ, ಐಯುಎಂಎಲ್‌, ಎಂಎನ್‌ಎಂಕೆ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡಿದೆ. ಬಿಜೆಪಿ, ಪಿಎಂಕೆ, ಡಿಎಂಡಿಕೆ, ಟಿಎಂಸಿ ಜತೆ ಎಐಎಡಿಎಂಕೆ ಮೈತ್ರಿ ಮಾಡಿಕೊಂಡಿದೆ.

ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಮುಂದೆ ಸವಾಲುಗಳ ಸಾಲೇ ಇದೆ. ಎರಡು ಅವಧಿಯ ಆಡಳಿತವಿರೋಧಿ ಅಲೆಯನ್ನು ಅವರು ಮೆಟ್ಟಿನಿಲ್ಲಬೇಕಿದೆ. ಜಯಲಲಿತಾ ಅವರ ಅನುಪಸ್ಥಿತಿಯಲ್ಲಿ, ಜನನಾಯಕ ಎಂಬ ಹಣೆಪಟ್ಟಿಯೂ ಇಲ್ಲದೆ ಪಳನಿಸ್ವಾಮಿ ಅವರು ಚುನಾವಣಾ ಕಣಕ್ಕೆ ಧುಮುಕಬೇಕಿದೆ. ಜತಗೆ, ಎಐಎಡಿಎಂಕೆ ಒಳಗಿನ ಭಿನ್ನಮತವನ್ನು ಹಾಗೂ ಮಾಜಿ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಅವರನ್ನು ನಿಭಾಯಿಸುವ ಸವಾಲೂ ಪಳನಿಸ್ವಾಮಿ ಅವರ ಮುಂದೆ ಇದೆ. ಎಐಎಡಿಎಂಕೆಯ ಮಾಜಿ ನಾಯಕಿ ಮತ್ತು ಜಯಲಲಿತಾ ಆಪ್ತೆಯಾಗಿದ್ದ ವಿ.ಕೆ. ಶಶಿಕಲಾ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದ ಪ್ರಕರಣದಲ್ಲಿ ಜೈಲು ಶಿಕ್ಷೆ ಮುಗಿಸಿ ತಮಿಳುನಾಡಿಗೆ ಮರಳಿದ್ದಾರೆ. ಎಐಎಡಿಎಂಕೆಗೆ ಅವರು ಯಾವ ರೀತಿಯಲ್ಲಿ ಪ್ರತಿರೋಧ ಒಡ್ಡಲಿದ್ದಾರೆ ಎಂಬುದೂ ಪಳನಿಸ್ವಾಮಿ ಅವರ ಸಮಸ್ಯೆಗಳ ತೀವ್ರತೆಯನ್ನು ನಿರ್ಧರಿಸಲಿದೆ. 

10 ವರ್ಷಗಳಿಂದ ಅಧಿಕಾರದಿಂದ ದೂರ ಉಳಿದಿರುವ ಡಿಎಂಕೆಯನ್ನು ಅಧಿಕಾರಕ್ಕೆ ತರುವ ಸವಾಲು ಎಂ.ಕೆ.ಸ್ಟಾಲಿನ್ ಅವರ ಮುಂದೆ ಇದೆ. ಹತ್ತು ವರ್ಷ ಅಧಿಕಾರದಲ್ಲಿದ್ದ ಎಐಎಡಿಎಂಕೆ ಬಗ್ಗೆ ಜನರಲ್ಲಿ ಮೂಡಿರುವ ಅತೃಪ್ತಿಯನ್ನು ಡಿಎಂಕೆ ನೆಚ್ಚಿಕೊಂಡಿದೆ. ಜತೆಗೆ, ಬಿಜೆಪಿ ದೇಶದಾದ್ಯಂತ ಹಿಂದಿ ಹೇರಲು ಯತ್ನಿಸುತ್ತಿದೆ ಎಂಬುದನ್ನೂ ಸ್ಟಾಲಿನ್‌ ಅವರು ತಮ್ಮ ಅಸ್ತ್ರವನ್ನಾಗಿಸಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು