ಮಂಗಳವಾರ, ಏಪ್ರಿಲ್ 13, 2021
28 °C

ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಅಜಯ್‌ ಸೇಠ್‌ ನೇಮಕ

ಪಿಟಿಐ‌ Updated:

ಅಕ್ಷರ ಗಾತ್ರ : | |

ನವದೆಹಲಿ: ಆರ್ಥಿಕ ವ್ಯವಹಾರಗಳ ಇಲಾಖೆಯ (ಡಿಇಎ) ಕಾರ್ಯದರ್ಶಿಯಾಗಿ ಕರ್ನಾಟಕ ಕೇಡರ್‌ನ 1987ನೇ ತಂಡದ ಐಎಎಸ್‌ ಅಧಿಕಾರಿ ಅಜಯ್‌ ಸೇಠ್‌ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.

ಇದುವರೆಗೂ ಈ ಸ್ಥಾನದಲ್ಲಿದ್ದ ಹರಿಯಾಣ ಕೇಡರ್‌ನ 1988ನೇ ತಂಡದ ಅಧಿಕಾರಿ ತರುಣ್‌ ಬಜಾಜ್‌ ಅವರನ್ನು ಕಂದಾಯ ಸಚಿವಾಲಯದ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.

ಇವರನ್ನು ಒಳಗೊಂಡು ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಮಂಗಳವಾರ ಆದೇಶಿಸಿದ್ದು, ವಿವರಗಳು ಹೀಗಿವೆ.

ರಾಜಾ ರಿಜ್ವಿ, ಕಾರ್ಯದರ್ಶಿ, ಸಾರ್ವಜನಿಕ ಉದ್ಯಮಗಳ ಸಚಿವಾಲಯ,

ಇಂಡೀವರ್‌ ಪಾಂಡೆ, ಕಾರ್ಯದರ್ಶಿ, ಆಡಳಿತ ಸುಧಾರಣಾ ಇಲಾಖೆ.

ಅಂಜಲಿ ಭಾವ್ರಾ, ಕಾರ್ಯದರ್ಶಿ ಅಂಗವಿಕಲರ ಸಬಲೀಕರಣ ಮತ್ತು ಸಾಮಾಜಿಕ ನ್ಯಾಯ ಸಚಿವಾಲಯ.

ಜಿತೇಂದ್ರ ನಾಥ್‌ ಸ್ವೇನ್‌, ವ್ಯವಸ್ಥಾಪಕ ನಿರ್ದೇಶಕ, ಸೋಲಾರ್‌ ಎನರ್ಜಿ ಕಾರ್ಪೊರೇಷನ್ ಆಫ್‌ ಇಂಡಿಯಾ.

ಅನಿಲ್‌ ಕುಮಾರ್ ಝಾ, ಕಾರ್ಯದರ್ಶಿ, ಬುಡಕಟ್ಟು ಜನರ ವ್ಯವಹಾರಗಳ ಸಚಿವಾಲಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು