ಶುಕ್ರವಾರ, ಜೂನ್ 18, 2021
28 °C

ಬಾರ್ಜ್‌ ದುರಂತ : ಸಾವಿನ ಸಂಖ್ಯೆ 51ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ತೌತೆ ಚಂಡಮಾರುತದಿಂದ ಅರಬ್ಬಿ ಸಮುದ್ರದಲ್ಲಿ ಬಾರ್ಜ್‌ ಮುಳುಗಿ ಸಂಭವಿಸಿದ ದುರಂತದಲ್ಲಿ ಸತ್ತವರ ಸಂಖ್ಯೆ 51ಕ್ಕೆ ಏರಿದೆ. ನೌಕಾಪಡೆ ಹಾಗೂ ಕರಾವಳಿ ಗಸ್ತು ಪಡೆಯವರು ಶುಕ್ರವಾರ ಇನ್ನೂ ಎರಡು ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ.

ಬಾರ್ಜ್‌ನಿಂದ ನಾಪತ್ತೆಯಾದ 24 ಮಂದಿ ಮತ್ತು ಆ್ಯಂಕರ್‌ ನಿರ್ವಹಣೆ ದೋಣಿಯಿಂದ ನಾಪತ್ತೆಯಾದ 11 ಮಂದಿಗಾಗಿ ಶೋಧ ಮುಂದುವರಿದಿದೆ. ಕಳೆದ ಸೋಮವಾರ ಮುಳುಗಡೆಯಾಗಿದ್ದ ಬಾರ್ಜ್‌ನಲ್ಲಿ ಒಟ್ಟು 261 ಜನರಿದ್ದರು. ಅವರಲ್ಲಿ 186 ಮಂದಿಯನ್ನು ರಕ್ಷಿಸಲಾಗಿದೆ. ಆ್ಯಂಕರ್‌ ನಿರ್ವಹಣೆ ದೋಣಿಯಲ್ಲಿದ್ದ 13 ಮಂದಿಯಲ್ಲಿ ಇಬ್ಬರನ್ನು ಮಾತ್ರ ತಕ್ಷಿಸಲಾಗಿದೆ. ಉಳಿದ 11 ಮಂದಿಗಾಗಿ ಶೋಧ ನಡೆದಿದೆ.

ಚಂಡಮಾರುತದ ಬಗ್ಗೆ ಎಚ್ಚರಿಕೆ ನೀಡಿದದರೂ ಈ ಬಾರ್ಜ್‌ ಪ್ರಕ್ಷುಬ್ಧ ಪ್ರದೇಶದಲ್ಲಿ ಉಳಿದದ್ದೇಕೆ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತರ ಕುಟುಂಬಕ್ಕೆ ನೆರವು: ಬಾರ್ಜ್‌ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ₹35‌ ಲಕ್ಷದಿಂದ ಗರಿಷ್ಠ ₹75 ಲಕ್ಷದಷ್ಟು ಪರಿಹಾರ ನೀಡುವುದಾಗಿ ಅಫ್ಕನ್ಸ್‌ ಇಫ್ರಾಸ್ಟ್ರಕ್ಚರ್‌ ಸಂಸ್ಥೆ ಶುಕ್ರವಾರ ತಿಳಿಸಿದೆ. ದುರಂತಕ್ಕೆ ಒಳಗಾಗಿದ್ದ ಬಾರ್ಜ್‌ ಈ ಸಂಸ್ಥೆಗೆ ಸೇರಿದ್ದಾಗಿದೆ.

‘ದುರಂತದಲ್ಲಿ ಜೀವ ಕಳೆದುಕೊಂಡ ನೌಕರರು ಮತ್ತು ಸಿಬ್ಬಂದಿಯ ಬಾಕಿ 10 ವರ್ಷಗಳ ಸೇವಾ ವೇತನ ಮತ್ತು ವಿಮಾ ಪರಿಹಾರವನ್ನು ಇದು ಒಳಗೊಂಡಿದೆ. ಪ್ರತಿ ಕುಟುಂಬಕ್ಕೆ ₹35 ಲಕ್ಷದಿಂದ ₹75 ಲಕ್ಷದವರೆಗೂ ಪರಿಹಾರ ಸಿಗಲಿದೆ’ ಎಂದು ಅಫ್ಕನ್ಸ್‌ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು