ನವದೆಹಲಿ:ಸಾಫ್ಟ್ವೇರ್ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಂಪನಿ, ತನ್ನ ಸಿಬ್ಬಂದಿ ಮತ್ತು ಅವರ ಅವಲಂಬಿತರ ಆರೈಕೆಗಾಗಿ ದೇಶದ ವಿವಿಧ ಭಾಗಗಳಲ್ಲಿರುವ ತಮ್ಮ ಕಚೇರಿ ಆವರಣದಲ್ಲಿ ‘ಕೋವಿಡ್ 19 ಐಸೊಲೇಷನ್ ಕೇಂದ್ರಗಳನ್ನು' ಆರಂಭಿಸಿದೆ.

ಬೆಂಗಳೂರು ಸೇರಿದಂತೆ ದೇಶದಾದ್ಯಂತ ಹನ್ನೊಂದು ನಗರಗಳಲ್ಲಿರುವ ತಮ್ಮ ಕಂಪನಿ ಕಚೇರಿಯ ಆವರಣದಲ್ಲಿ ಈ ಕೇಂದ್ರಗಳನ್ನು ಆರಂಭಿಸಿದೆ. ಈ ಬಗ್ಗೆ ತಮ್ಮ ಕಂಪನಿಯ ಎಲ್ಲ ನೌಕರರಿಗೆ ಇಮೇಲ್ ಮೂಲಕ ಮಾಹಿತಿ ನೀಡಿದೆ.

ಈ ಕೋವಿಡ್ ಕೇಂದ್ರಗಳಲ್ಲಿ ಸೋಂಕು ಲಕ್ಷಣ ರಹಿತರು ಅಥವಾ ಸೌಮ್ಯ ಲಕ್ಷಣವಿರುವ ಕಂಪನಿಯ ನೌಕರರರು ಮತ್ತು ಅವರನ್ನು ಅವಲಂಬಿಸಿರುವವರಿಗೆ (ಪತ್ನಿ, ಮಕ್ಕಳು ಮತ್ತು ತಂದೆ ತಾಯಿ / ಅತ್ತೆ ಮಾವ) ವೈದ್ಯಕೀಯ ಸೌಲಭ್ಯಗಳನ್ನು ನೀಡಲಿವೆ. ಈ ಕೇಂದ್ರಗಳು 24X7 ಕಾರ್ಯನಿರ್ವಹಿಸಲಿದೆ.

ಬೆಂಗಳೂರು ಸೇರಿದಂತೆ ಚೆನ್ನೈ, ಕೊಚ್ಚಿ, ಮುಂಬೈ, ಪುಣೆ, ಕೋಲ್ಕತಾ, ಹೈದರಾಬಾದ್, ದೆಹಲಿ, ಭುವನೇಶ್ವರ, ಇಂದೋರ್ ಮತ್ತು ನಾಗಪುರದಲ್ಲಿರುವ ಟಿಸಿಎಸ್ ಕಚೇರಿಗಳಲ್ಲಿ ಈ ಕೇಂದ್ರಗಳು ಆರಂಭವಾಗಿದ್ದು, ಸರ್ಕಾರಗಳ ಮಾರ್ಗಸೂಚಿಗಳ ಪ್ರಕಾರವೇ ಕಾರ್ಯನಿರ್ವಹಿಸಲಿವೆ. ಪ್ರತಿ ಕೇಂದ್ರವೂ 20 ರಿಂದ 30 ಹಾಸಿಗೆಗಳ ಸಾಮರ್ಥ್ಯ ಹೊಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.