ಮುಂಬೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರುಮುಂಬರುವಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆ ಹಿನ್ನಲೆಯಲ್ಲಿ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಠಾಕ್ರೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿರುವ ಶಾ, ಪಾಲಿಕೆ ಚುನಾವಣೆಯಲ್ಲಿ ಪಾಠ ಕಲಿಸುವಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಅಮಿತ್ ಶಾ ಅವರುಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಶೇಖರ್ ಬವಂಕುಲೆ ಹಾಗೂ ಮುಂಬೈ ಘಟಕದ ಅಧ್ಯಕ್ಷ ಆಶೀಶ್ ಶೇಲರ್ ಸೇರಿದಂತೆ ಪಕ್ಷದ ಪ್ರಮುಖರು ಭಾಗಿಯಾಗಿದ್ದ ಕಾರ್ಯಕಾರಿಣಿಯಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.

ಬಿಎಂಸಿ ಚುನಾವಣೆಯಲ್ಲಿ ಶೇ 50 ಸ್ಥಾನಗಳಲ್ಲಿ ಪಕ್ಷ ಜಯಿಸಬೇಕು ಎಂದು ಗುರಿ ನೀಡಿದ್ದಾರೆ.

ಇದೇ ವೇಳೆ,ಕಳೆದ (2019ರ) ವಿಧಾನಸಭೆ ಚುನಾವಣೆ ನಂತರ ಉದ್ಧವ್ ಠಾಕ್ರೆ ಬಿಜೆಪಿಗೆ ಮೋಸ ಮಾಡಿದ್ದಾರೆ ಎಂದಿರುವ ಶಾ,'ಅವರು (ಉದ್ಧವ್ ಠಾಕ್ರೆ) ಇರಬೇಕಾದ ಸ್ಥಳ ಯಾವುದು ಎಂಬುದನ್ನು ತೋರಿಸುವ ಮತ್ತು ಪಾಠ ಕಲಿಸುವ ಸಮಯ ಇದೀಗ ಬಂದಿದೆ' ಎಂದು ಹೇಳಿದ್ದಾರೆ.

'ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡಣವೀಸ್ ಅವರ ಆಡಳಿತದ ಹೆಸರಿನಲ್ಲಿ ಮತ ಕೇಳಿದ್ದನೀವು (ಶಿವಸೇನಾ) ನಂತರ ಜನರಿಗೆ ಮೋಸ ಮಾಡಿದ್ದೀರಿ. ರಾಜಕೀಯದಲ್ಲಿ ದ್ರೋಹ ಬಗೆಯುತ್ತೀರಿ ಎಂದರೆ, ಪ್ರಾಮಾಣಿಕರಾಜಕೀಯದಲ್ಲಿ ಮುಂದುವರಿಯಲಾರಿರಿ' ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.

ಈ ಹೇಳಿಕೆಗಳಿಗೆ ತಿರುಗೇಟು ನೀಡಿರುವ ಶಿವಸೇನಾ ವಕ್ತಾರ ಅರವಿಂದ್ ಸಾವಂತ್, ಬಿಜೆಪಿಯವರ ಧೋರಣೆಗಳೇ ಹೀಗೆ. ಈ ಹಿಂದೆಯೂ ಶಿವಸೇನಾಗೆ ಪಾಠ ಕಲಿಸಬೇಕು ಎಂದು ಹೇಳುತ್ತಿದ್ದ ಬಿಜೆಪಿ ನಾಯಕರು 2019ರ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಸಂದರ್ಭಗಳಲ್ಲಿ ಮೈತ್ರಿ ಮಾಡಿಕೊಳ್ಳುವುದಾಗಿ ಬಂದಿದ್ದರು ಎಂದು ಪ್ರತಿಕ್ರಿಯಿಸಿದ್ದಾರೆ.

ಗೋದ್ರಾ ಗಲಭೆ ಉಲ್ಲೇಖಿಸಿ ಚಾಟಿ ಬೀಸಿರುವ ಸಾವಂತ್,2002ರಲ್ಲಿ ಗಲಭೆ ನಡೆದಾಗಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಬೆಂಬಲಕ್ಕೆ ಶಿವಸೇನಾ ನಿಂತಿತ್ತು.ಮೋದಿಯನ್ನು ಕೆಳಗಿಳಿಸದಂತೆ ಆಗಿನ ಕೇಂದ್ರ ಗೃಹ ಸಚಿವ ಎಲ್.ಕೆ. ಅಡ್ವಾಣಿ ಅವರಿಗೆ ಬಾಳಾ ಸಾಹೇಬ್ ಠಾಕ್ರೆ (ಶಿವಸೇನಾ ನಾಯಕ) ಒತ್ತಾಯ ಮಾಡಿದ್ದರು ಎಂದು ತಿಳಿಸಿದ್ದಾರೆ.

2019ರ ವಿಧಾನಸಭೆ ಚುನಾವಣೆಗೂ ಮುನ್ನ ಮೃತ್ರಿ ಮಾಡಿಕೊಂಡಿದ್ದಬಿಜೆಪಿ ಹಾಗೂ ಶಿವಸೇನಾ ಒಮ್ಮತದಿಂದ ಸ್ಪರ್ಧಿಸಿದ್ದವು. 288 ಕ್ಷೇತ್ರಗಳ ಪೈಕಿ 164 ಕಡೆ ಸ್ಪರ್ಧಿಸಿದ್ದ ಬಿಜೆಪಿ 105 ಸ್ಥಾನಗಳನ್ನು ಮತ್ತು 126 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಶಿವಸೇನಾ 56 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ನಂತರದ ಬೆಳವಣಿಗೆಯಲ್ಲಿ ಶಿವಸೇನಾ ಪಕ್ಷವು ಬಿಜೆಪಿಯಿಂದ ಅಂತರ ಕಾಯ್ದುಕೊಂಡು ಕಾಂಗ್ರೆಸ್ ಮತ್ತು ಎನ್‌ಸಿಪಿ ಸಹಕಾರದೊಂದಿಗೆ 'ಮಹಾವಿಕಾಸ ಆಘಾಡಿ' ಸರ್ಕಾರ ರಚಿಸಿತ್ತು. ಆದರೆ, ಶಿವಸೇನಾದ ಹಲವು ಶಾಸಕರು ಜೂನ್ ತಿಂಗಳಲ್ಲಿ ಸರ್ಕಾರದ ವಿರುದ್ಧ ಬಂಡಾಯ ಸಾರಿದ್ದರು.

ನಂತರಬಂಡಾಯ ಶಾಸಕರ ಗುಂಪಿನ ನಾಯಕಏಕನಾಥ ಶಿಂದೆ ಬಿಜೆಪಿ ಬೆಂಬಲದೊಂದಿಗೆ (ಜೂನ್ 30ರಂದು) ಸರ್ಕಾರ ರಚನೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.