ಭಾನುವಾರ, ನವೆಂಬರ್ 29, 2020
21 °C

ತೇಜಸ್ವಿ ಸಿಎಂ ಆಗಿದ್ದರೇ ಬಿಹಾರ ಜಂಗಲ್‌ ರಾಜ್ಯ ಆಗುತ್ತಿತ್ತು: ಉಮಾ ಭಾರತಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಭೋಪಾಲ್: ಮಹಾಘಟಬಂಧನ್ ಅಧಿಕಾರಕ್ಕೆ ಬಂದಿದ್ದರೆ ಬಿಹಾರ ಮತ್ತೆ ‘ಜಂಗಲ್‌ ರಾಜ್ಯ’ ಆಗುತ್ತಿತ್ತು ಎಂದು ಬಿಜೆಪಿ ನಾಯಕಿ ಉಮಾ ಭಾರತಿ ಅಭಿಪ್ರಾಯಪಟ್ಟಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಸ್ವಾಗತಿಸಿರುವ ಉಮಾ ಭಾರತಿ, ಮಹಾಘಟಬಂಧನ್ ನಾಯಕ ತೇಜಸ್ವಿ ಯಾದವ್ ಅವರ ಚುನಾವಣೆ ಹೋರಾಟವನ್ನು ಹೊಗಳಿದ್ದಾರೆ.

ತೇಜಸ್ವಿ ಯಾದವ್‌ ಒಳ್ಳೆಯ ಹುಡುಗ, ಆದರೆ ಅವರಿಗೆ ರಾಜಕೀಯ ಮತ್ತು ಆಡಳಿತದ ಅನುಭವ ಕಡಿಮೆ. ಒಂದು ಪಕ್ಷ ತೇಜಸ್ವಿ ಮುಖ್ಯಮಂತ್ರಿಯಾಗಿದ್ದಾರೆ, ಅವರ ತಂದೆ ಲಾಲು ಪ್ರಸಾದ್‌ ಹಿಂಬಾಗಿಲಿನಿಂದ ಆಡಳಿತ ನಡೆಸುತ್ತಿದ್ದರು. ಆಗ ಬಿಹಾರ ಮತ್ತೆ ಜಂಗಲ್‌ ರಾಜ್ಯ ಆಗುತ್ತಿತ್ತು ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಮಹಾಘಟಬಂಧನ ಅಧಿಕಾರಕ್ಕೆ ಬರದಿರುವುದೇ ಒಳ್ಳೆಯ ಬೆಳವಣಿಗೆ ಎಂದು ಅವರು ಬಿಹಾರ ವಿಧಾನಸಭಾ ಫಲಿತಾಂಶವನ್ನು ವಿಶ್ಲೇಷಣೆ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು