ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ ಸಿಎಂ ಕೆಸಿಆರ್‌ ಮಗಳು ಕವಿತಾರ ಟ್ವಿಟರ್‌ ಫಾಲೋವರ್‌ಗಳ ಸಂಖ್ಯೆ 10 ಲಕ್ಷ

ಟ್ವಿಟರ್‌ನಲ್ಲಿ ಹೆಚ್ಚು ಫಾಲೋವರ್‌ ಇರುವ ದಕ್ಷಿಣ ಭಾರತದ ಮಹಿಳಾ ರಾಜಕಾರಣಿ
Last Updated 20 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದಲ್ಲಿ ಟ್ವಿಟರ್ ಖಾತೆಯಲ್ಲಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವವರ ಪಟ್ಟಿಯಲ್ಲಿ ರಾಜಕಾರಣಿಗಳದ್ದು ಮೊದಲ ಸ್ಥಾನ. ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ, ಶಶಿ ತರೂರ್‌, ಸ್ಮೃತಿ ಇರಾನಿ, ಪ್ರಿಯಾಂಕಾ ಗಾಂಧಿ ಮುಂತಾದವರು ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ. ಈಗ ಈ ಪಟ್ಟಿಗೆ ಕೆ. ಕವಿತಾ ಅವರೂ ಸೇರ್ಪಡೆಯಾಗಿದ್ದಾರೆ.

ಕವಿತಾ ಅವರು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಮಗಳು. ಕವಿತಾ ಅವರ ಟ್ವಿಟರ್ ಖಾತೆಯ ಫಾಲೋವರ್‌ಗಳ ಸಂಖ್ಯೆ ಭಾನುವಾರವಷ್ಟೇ 10 ಲಕ್ಷದ ಗಡಿಯನ್ನು ದಾಟಿದೆ. ಟ್ವಿಟರ್‌ನಲ್ಲಿ ಈ ಮೈಲುಗಲ್ಲನ್ನು ಮುಟ್ಟಿದ ದಕ್ಷಿಣ ಭಾರತದ ಏಕೈಕ ಮಹಿಳಾ ರಾಜಕಾರಣಿ ಎಂಬ ಹೆಗ್ಗಳಿಕೆಗೂ ಕವಿತಾ ಪಾತ್ರರಾಗಿದ್ದಾರೆ.

ಟ್ವಿಟರ್‌ನಲ್ಲಿ ಹೆಚ್ಚು ಫಾಲೋವರ್‌ಗಳನ್ನು ಸಂಪಾದಿಸುವುದು ದೊಡ್ಡ ಸಾಧನೆಯೇ ಸರಿ. ಆದರೆ, ದೀರ್ಘಕಾಲ ಈ ಫಾಲೋವರ್‌ಗಳನ್ನು ಉಳಿಸಿಕೊಳ್ಳುವುದು ಮತ್ತು ಟ್ವಿಟರ್‌ ಅನ್ನು ಜನಹಿತಾಸಕ್ತಿ ವಿಚಾರಗಳಿಗೆ ಬಳಸಿಕೊಳ್ಳುವುದು ಸವಾಲೇ ಸರಿ. ಕವಿತಾ ಅವರು ಬೇರೆ ರಾಜಕಾರಣಿಗಳಿಗಿಂತ ಪ್ರತ್ಯೇಕವಾಗಿ ನಿಲ್ಲುವುದು ಈ ವಿಚಾರದಲ್ಲೆ. ಅವರಿಗೆ ಟ್ವಿಟರ್‌ನಲ್ಲಿ ಇಷ್ಟು ಅನುಯಾಯಿಗಳು ಒಮ್ಮಿಂದೊಮ್ಮೆಲೇ ದೊರೆತಿಲ್ಲ. ಬದಲಿಗೆ 10 ವರ್ಷದಲ್ಲಿ ಅವರು ಇಷ್ಟು ಸಂಖ್ಯೆಯ ಫಾಲೋವರ್‌ಗಳನ್ನು ಸಂಪಾದಿಸಿದ್ದಾರೆ.

ಅಮೆರಿಕದಿಂದ ಹಿಂತಿರುಗಿದ್ದ ಕವಿತಾ ಅವರು ರಾಜಕಾರಣಕ್ಕೆ ಪ್ರವೇಶ ಪಡೆದಿದ್ದು,‍ಪ್ರತ್ಯೇಕ ತೆಲಂಗಾಣ ಹೋರಾಟದ ಮೂಲಕ. ಈ ಹೋರಾಟದ ವಿಚಾರದಲ್ಲಿ ಜನರನ್ನು ಜಾಗೃತಗೊಳಿಸುವ ಉದ್ದೇಶದಿಂದ ಅವರು ‘ತೆಲಂಗಾಣ ಜಾಗೃತಿ’ ಎಂಬ ಸ್ವಯಂಸೇವಾ ಸಂಸ್ಥೆಯನ್ನು ಹುಟ್ಟುಹಾಕಿದರು. ಈ ಹೋರಾಟಕ್ಕೆ ರಾಜ್ಯದಲ್ಲಿ ನೆಲೆಸಿದ್ದ ಜನರ ಬೆಂಬಲವಷ್ಟೇ ಸಾಲುವುದಿಲ್ಲ. ವಿದೇಶಗಳಲ್ಲಿ ನೆಲೆಸಿರುವ ರಾಜ್ಯದ ಜನರ ಬೆಂಬಲವೂ ಬೇಕು ಎಂದು ಕವಿತಾ ಪ್ರತಿಪಾದಿಸಿದ್ದರು. 2010ರ ಆಗಸ್ಟ್‌ನಲ್ಲಿ ಟ್ವಿಟರ್ ಖಾತೆ ತೆರೆಯುವ ಮೂಲಕ, ಪ್ರತ್ಯೇಕ ರಾಜ್ಯದ ಹೋರಾಟವನ್ನು ಸಾಮಾಜಿಕ ಜಾಲತಾಣದ ಮೂಲಕವೂ ಸಂಘಟಿಸಲು ಮುಂದಾದರು.

ಪ್ರತ್ಯೇಕ ರಾಜ್ಯದ ಅಗತ್ಯವನ್ನು ಟ್ವೀಟ್‌ಗಳ ಮೂಲಕ ವಿವರಿಸುವ ಕೆಲಸ ಆರಂಭಿಸಿದ್ದ ಕವಿತಾ ಅವರಿಗೆ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಅಂದಿನ ಅವಿಭಜಿತ ಆಂಧ್ರಪ್ರದೇಶ ಸರ್ಕಾರವನ್ನು ಟೀಕಿಸಲು, ಸರ್ಕಾರದ ವೈಫಲ್ಯಗಳನ್ನು ಜನರ ಎದುರು ಇಡಲು, ಜನರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲು ಅವರು ಟ್ವಿಟರ್ ಅನ್ನು ಬಳಸಿಕೊಂಡರು.ಕವಿತಾ ಅವರು ತಮ್ಮನ್ನು ಟ್ಯಾಗ್‌ ಮಾಡಿ ಟ್ವೀಟ್ ಮಾಡಿದವರಲ್ಲಿ ಬಹುತೇಕ ಎಲ್ಲರಿಗೂ ಪ್ರತಿಕ್ರಿಯೆ ನೀಡುತ್ತಾರೆ. ಈಚೆಗೆ ರಾಜ್ಯದ ಯುವಕನೊಬ್ಬ ತನ್ನ ತಂಗಿಯ ಜನ್ಮದಿನಕ್ಕೆ ಶುಭಕೋರಿ ಎಂದು ಮಾಡಿರುವ ಟ್ವೀಟ್‌ಗೂ ಕವಿತಾ ಪ್ರತಿಕ್ರಿಯೆ ನೀಡಿದ್ದಾರೆ. ಹೀಗೆ ತಮ್ಮ ಫಾಲೋವರ್‌ಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವ ಕೆಲಸ ಮಾಡುತ್ತಾರೆ.

ತೆಲಂಗಾಣ ರಾಜ್ಯ ರಚನೆಯಾದ ನಂತರ ಸಂಸತ್ತಿನ ಸದಸ್ಯೆಯಾಗಿ ರಾಜ್ಯದಿಂದ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯೂ ಅವರಿಗಿದೆ. ಪ್ರಾದೇಶಿಕ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದಂತೆ ಮತ್ತು ರಾಜ್ಯದ ಜನರು, ರೈತರಿಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಅವರ ಪ್ರಶ್ನೆಗಳು, ಮಾತುಗಳು ದೇಶದಾದ್ಯಂತ ಸುದ್ದಿಯಾಗಿದ್ದವು. ರಕ್ಷಾಬಂಧನದ ಅಂಗವಾಗಿ ಅವರು ಟ್ವಿಟರ್‌ನಲ್ಲಿ ಆರಂಭಿಸಿದ್ದ#SistersForChange ಮತ್ತು#GiftAHelmet ಅಭಿಯಾನಗಳಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಈಗ ಕೋವಿಡ್‌ ಯೋಧರಿಗೆ ಧನ್ಯವಾದ ಅರ್ಪಿಸಲು ಆರಂಭಿಸಿ ರುವ #ThankYouWarriors ಅಭಿಯಾನದಲ್ಲೂ ಜನರ ಪಾಲ್ಗೊಳ್ಳುವಿಕೆ ಉತ್ತಮವಾಗಿದೆ. ಟ್ವಿಟರ್ ಅನ್ನು ಈ ರೀತಿ ಬಳಸಿಕೊಳ್ಳುತ್ತಿರುವುದರಿಂದಲೇ ಅವರ, ಅನುಯಾಯಿಗಳ ಬಳಗ ಪ್ರತಿದಿನವೂ ದೊಡ್ಡದಾಗುತ್ತಿದೆ.

ಟ್ವಿಟರ್‌ನಲ್ಲಿ ಸಕ್ರಿಯವಾಗಿರುವ ದಕ್ಷಿಣ ಭಾರತದ ಇತರ ಮಹಿಳಾ ರಾಜಕಾರಣಿಗಳ ಫಾಲೋವರ್‌ಗಳ ಸಂಖ್ಯೆ ಮತ್ತು ಕವಿತಾ ಅವರ ಫಾಲೋವರ್‌ಗಳ ಸಂಖ್ಯೆ ಮಧ್ಯೆ 5 ಲಕ್ಷಕ್ಕೂ ಹೆಚ್ಚು ಅಂತರವಿದೆ. ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಜನರನ್ನು ತಲುಪಲು, ಜನರಿಗೆ ಸ್ಪಂದಿಸಲು ಟ್ವಿಟರ್‌ ಅನ್ನು ಸಕ್ರಿಯವಾಗಿ ಬಳಸಿಕೊಂಡಿದ್ದರಿಂದಲೇ ಸಾಮಾಜಿಕ ಜಾಲತಾಣದಲ್ಲಿ ಅವರ ಇರುವು ಮತ್ತಷ್ಟು ಗಟ್ಟಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT