ಶನಿವಾರ, ಆಗಸ್ಟ್ 20, 2022
21 °C

ತೆಲಂಗಾಣ: ಕೋವಿಡ್‌ ರೋಗಿಗೆ ಶ್ವಾಸಕೋಶ ಕಸಿ, ದೇಶದಲ್ಲೇ ಮೊದಲು ಎಂದ ವೈದ್ಯರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ಕೋವಿಡ್–19 ನಿಂದ ಬಳಲುತ್ತಿದ್ದ ವ್ಯಕ್ತಿಗೆ ಯಶಸ್ವಿಯಾಗಿ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ ಎಂದು ಹೈದರಾಬಾದ್‌ನ ಕೃಷ್ಣ ಇನ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ನ ವೈದ್ಯರು ಹೇಳಿದ್ದಾರೆ. ಇಂಥ ಶಸ್ತ್ರಚಿಕಿತ್ಸೆ ನೆರವೇರಿಸಿರುವುದು ದೇಶದಲ್ಲಿಯೇ ಮೊದಲು ಎಂದೂ ಹೇಳಿಕೊಂಡಿದ್ದಾರೆ.

ಡಾ.ಸಂದೀಪ್‌ ಅತ್ತಾವರ ನೇತೃತ್ವದ ವೈದ್ಯರ ತಂಡ ಚಂಡೀಗಡ ಮೂಲದ 32 ವರ್ಷದ ವ್ಯಕ್ತಿಗೆ ಈ ಶಸ್ತ್ರಚಿಕಿತ್ಸೆ ನೆರವೇರಿಸಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. 

‘ಶ್ವಾಸಕೋಶ ಸಂಬಂಧಿ ಕಾಯಿಲೆ ‘ಸರ್ಕೋಯ್‌ಡೊಸಿಸ್‌’ ನಿಂದ ಬಳಲುತ್ತಿದ್ದ ಈ ವ್ಯಕ್ತಿಗೆ ಕೋವಿಡ್‌–19 ತಗುಲಿದ್ದರಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಯಿತು. ಹೀಗಾವಿ ಅವರಿಗೆ ತುರ್ತಾಗಿ ಶ್ವಾಸಕೋಶ ಕಸಿ ಮಾಡುವುದು ಅನಿವಾರ್ಯವಾಗಿತ್ತು’ ಎಂದು ಡಾ.ಅತ್ತಾವರ ತಿಳಿಸಿದರು.

ಇದನ್ನೂ ಓದಿ: 

‘ಮಿದುಳು ನಿಷ್ಕ್ರಿಯಗೊಂಡಿದ್ದ ಕೋಲ್ಕತ್ತ ಮೂಲದ ವ್ಯಕ್ತಿಯ ಶ್ವಾಸಕೋಶಗಳು ಲಭ್ಯ ಇರುವ ಮಾಹಿತಿ ಲಭಿಸಿತು. ಏರ್‌ಲಿಫ್ಟ್‌ ನೆರವಿನಿಂದ ತರಿಸಿಕೊಳ್ಳಲಾದ ಶ್ವಾಸಕೋಶಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಚಂಡೀಗಡ ಮೂಲದ ರೋಗಿಗೆ ಕಸಿ ಮಾಡಲಾಯಿತು’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು