ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಪಿಡುಗು ಕೊನೆಗಾಣಿಸಲು ತಮಿಳುನಾಡಿನಲ್ಲಿ ‘ಕೊರೊನಾ ದೇವಿ’ ದೇವಾಲಯ

ಪಿಡುಗು ಕೊನೆಗಾಣಿಸಲು ತಮಿಳುನಾಡಿನಲ್ಲಿ ದೇಗುಲ ನಿರ್ಮಾಣ
Last Updated 21 ಮೇ 2021, 19:31 IST
ಅಕ್ಷರ ಗಾತ್ರ

ಕೊಯಮತ್ತೂರು: ದೇಶವನ್ನು ಕಾಡುತ್ತಿರುವ ಕೋವಿಡ್‌–19 ಸಾಂಕ್ರಾಮಿಕ ಪಿಡುಗನ್ನು ಕೊನೆಗಾಣಿಸಲು ದೈವಿಕ ಹಸ್ತಕ್ಷೇಪದ ಅಗತ್ಯವಿದೆ ಎಂದು ಮನಗಂಡು ಇಲ್ಲಿನ ಮಠವೊಂದು ‘ಕೊರೊನಾ ದೇವಿ’ ದೇವಾಲಯ ನಿರ್ಮಿಸಿ, ನಿತ್ಯ ಪೂಜಾ ವಿಧಿಗಳನ್ನು ನೆರವೇರಿಸುತ್ತಿದೆ.

ಕಮಾಚಿಪುರಿ ಅಧೀನಂ ಮಠವು ನಗರದ ಹೊರವಲಯ ಇರುಗೂರಿನಲ್ಲಿ ಇತ್ತೀಚೆಗೆ ದೇವಾಲಯ ನಿರ್ಮಿಸಿ, 1.5 ಅಡಿ ಎತ್ತರದ ಕಪ್ಪು ಕಲ್ಲಿನ ದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ‘ಕೊರೊನಾ ದೇವಿ’ ಎಂದು ನಾಮಕರಣ ಮಾಡಿದೆ.

150 ವರ್ಷಗಳ ಹಿಂದೆ ಪ್ಲೇಗ್‌ ಕಾಯಿಲೆಯಿಂದ ಸಾಕಷ್ಟು ಜನರ ಪ್ರಾಣ ಹಾನಿಗಳು ಆದಾಗ ಕೊಯಮತ್ತೂರಿನಲ್ಲಿ ‘ಪ್ಲೇಗ್‌ ಮಾರಿಯಮ್ಮ ದೇವಾಲಯ’ ನಿರ್ಮಿಸಲಾಗಿತ್ತು. ಈಗ ಇದೇ ಹಾದಿಯಲ್ಲಿ ಕೊರೊನಾ ದೇವಿ ದೇವಾಲಯವನ್ನು ನಿರ್ಮಿಸಲಾಗಿದೆ.

‘ಕೊಯಮತ್ತೂರು ಸೇರಿದಂತೆ ಇಡೀ ದೇಶದ ಜನರನ್ನು ಕೋವಿಡ್‌ ಸಾಂಕ್ರಾಮಿಕ ರೋಗ ಕಾಡುತ್ತಿದೆ. ಹೀಗಾಗಿ ಮಠದ ಆವರಣದಲ್ಲಿ ಕೊರೊನಾ ದೇವಿ ದೇವಾಲಯ ನಿರ್ಮಿಸಲಾಗಿದೆ. ಈ ವೈರಾಣುವಿನಿಂದ ಜನರನ್ನು ಕಾಪಾಡುವಂತೆ ದೇವಿಯನ್ನು ನಿತ್ಯ ಪ್ರಾರ್ಥಿಸಿ, ಪೂಜೆಗಳನ್ನು ನೆರವೇರಿಸಲಾಗುತ್ತದೆ. 48 ದಿನಗಳು ವಿಶೇಷ ಪೂಜೆಗಳು ನಡೆಯಲಿವೆ’ ಎಂದು ಮಠದ ಮೂಲಗಳು ತಿಳಿಸಿವೆ.

‘ಸಾಂಕ್ರಾಮಿಕದ ಕಾರಣ ಅರ್ಚಕರು ಮತ್ತು ಮಠದ ಅಧಿಕಾರಿಗಳಿಗೆ ಮಾತ್ರ ಕೊರೊನಾ ದೇವಿ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು, ವೈಯಕ್ತಿಕ ಅಂತರವನ್ನು ಕಾಯ್ದುಕೊಳ್ಳ ಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT