ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವದೆಹಲಿ: ಗಾಳಿಯ ಗುಣಮಟ್ಟ ‘ತುಂಬಾ ಕಳಪೆ’; ಹಲವು ಪ್ರದೇಶಗಳಲ್ಲಿ ಆವರಿಸಿದ ಹೊಂಜು

Last Updated 13 ನವೆಂಬರ್ 2020, 4:48 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ‘ಅತ್ಯಂತ ಕಳಪೆ’ ಮಟ್ಟದಲ್ಲಿದ್ದು, ಶುಕ್ರವಾರ ಬೆಳಗ್ಗೆ ಹಲವು ಪ್ರದೇಶಗಳಲ್ಲಿ ಹೊಂಜು ಆವರಿಸಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತಿಳಿಸಿದೆ.

ಸಿಪಿಸಿಬಿ ನಿರ್ವಹಿಸುತ್ತಿರುವ ವಾಯು ಗುಣಮಟ್ಟದ ಸೂಚ್ಯಂಕ (ಎಕ್ಯೂಐ) ಪ್ರಕಾರ, ದೆಹಲಿಯ ಅಕ್ಕಪಕ್ಕದಲ್ಲಿರುವ ನೋಯಿಡಾ (ಉತ್ತರಪ್ರದೇಶ), ಗ್ರೇಟರ್‌ ನೋಯಿಡಾ, ಘಾಜಿಯಾಬಾದ್‌ ಮತ್ತು ಫರಿದಾಬಾದ್‌ನಲ್ಲಿ ಗಾಳಿಯ ಗುಣಮಟ್ಟ ‘ತೀರಾ ಕಳಪೆ’ ಮಟ್ಟದಲ್ಲಿದ್ದು, ರಾಷ್ಟ್ರ ರಾಜಧಾನಿ ಪ್ರದೇಶದ (ಎನ್‌ಸಿಆರ್‌) ಗುರುಗ್ರಾಮದಲ್ಲಿ ‘ಕಳಪೆ’ ಮಟ್ಟದಲ್ಲಿದೆ.

ವಾಯು ಗುಣಮಟ್ಟದ ಸೂಚ್ಯಂಕದ ಪ್ರಕಾರ, ಪ್ರತಿ ಘನಮೀಟರ್ ಗಾಳಿಯಲ್ಲಿರುವ 2.5 ಮೈಕ್ರಾನ್ ಗಾತ್ರದ (ಪಿಎಂ 2.5) ಮಾಲಿನ್ಯಕಾರಕ ಕಣಗಳ ಸಂಖ್ಯೆ 0 ಯಿಂದ 50 ರಷ್ಟಿದ್ದರೆ ‘ಉತ್ತಮ’ ಎಂದು ಪರಿಗಣಿಸಲಾಗುತ್ತದೆ. 51 ರಿಂದ 100ರ ವರೆಗೆ ‘ಸಮಾಧಾನಕರ’, 101ರಿಂದ 200ರ ವರೆಗೆ ‘ಮಧ್ಯಮ’, 201ರಿಂದ 300ರ ವರೆಗೆ ‘ಕಳಪೆ‘, 300 ರಿಂದ 400ರ ವರೆಗೆ ‘ಅತ್ಯಂತ ಕಳಪೆ’ ಹಾಗೂ 400ರ ಮೇಲ್ಪಟ್ಟು ‘ವಿಪರೀತ ಅಪಾಯಕಾರಿ’ ಎಂದು ಪರಿಗಣಿಸಲಾಗುತ್ತದೆ.

ಗುರುವಾರ 4 ಗಂಟೆ ವೇಳೆ ಘಾಜಿಯಾಬಾದ್‌ನಲ್ಲಿ ಎಕ್ಯೂಐ ಮಟ್ಟ 328, ಗ್ರೇಟರ್‌ ನೋಯಿಡಾದಲ್ಲಿ 327, ನೋಯಿಡಾದಲ್ಲಿ 305, ಫರಿದಾಬಾದ್‌ನಲ್ಲಿ 304 ಮತ್ತು ಗುರುಗ್ರಾಮದಲ್ಲಿ 283ರಷ್ಟಿತ್ತು. ಇದು ಬುಧವಾರ ಘಾಜಿಯಾಬಾದ್‌ನಲ್ಲಿ 360, ಗ್ರೇಟರ್‌ ನೋಯಿಡಾದಲ್ಲಿ 340, ನೋಯಿಡಾದಲ್ಲಿ 309, ಫರಿದಾಬಾದ್‌ನಲ್ಲಿ 327 ಮತ್ತು ಗುರುಗ್ರಾಮದಲ್ಲಿ 288ರಷ್ಟಿತ್ತು.

ಅಂಕಿ–ಅಂಶಗಳ ಪ್ರಕಾರ ದೆಹಲಿಯ ಅಕ್ಕಪಕ್ಕದ ಈ ಐದು ನಗರಗಳಲ್ಲಿನ ಗಾಳಿಯ ಗುಣಮಟ್ಟವು ಮಂಗಳವಾರದವರೆಗೆ ವಿಪರೀತ ಅಪಾಯಕಾರಿ ಮಟ್ಟದಲ್ಲಿರಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT