ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೆಂಬರ್ 5ಕ್ಕೆ ಮತ್ತೆ ಕೇಂದ್ರ–ರೈತರ ಮಾತುಕತೆ

Last Updated 3 ಡಿಸೆಂಬರ್ 2020, 15:00 IST
ಅಕ್ಷರ ಗಾತ್ರ

ನವದೆಹಲಿ: ಪ್ರತಿಭಟನಾ ರೈತರೊಂದಿಗೆ ಗುರುವಾರ ಕೇಂದ್ರ ಸರ್ಕಾರವು ಎರಡನೇ ಸುತ್ತಿನ ಮಾತುಕತೆ ನಡೆಸಿದ್ದು, ಡಿಸೆಂಬರ್‌ 5ಕ್ಕೆ ಮುಂದಿನ ಹಂತದ ಮಾತುಕತೆ ನಿಗದಿಯಾಗಿದೆ.

ಕೃಷಿ ಕ್ಷೇತ್ರದ ಸುಧಾರಣೆಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್ ಮಾತುಕತೆ ನಡೆಸಿದರು.

'ಸರ್ಕಾರವು ಯಾವುದೇ ಅಹಂ ತೋರದೆ ತರೆದ ಮನಸ್ಸಿನಿಂದ ಮಾತುಕತೆ ನಡೆಸುತ್ತಿದೆ. ಹೊಸ ಕಾಯ್ದೆಗಳು ಎಪಿಎಂಸಿಗಳನ್ನು ಅಂತ್ಯಗೊಳಿಸುತ್ತವೆ ಎನ್ನುವ ಕಳಕಳಿಯನ್ನು ರೈತರು ವ್ಯಕ್ತಪಡಿಸಿದ್ದಾರೆ' ಎಂದು ನರೇಂದ್ರ ಸಿಂಗ್‌ ತೋಮರ್‌ ಹೇಳಿದ್ದಾರೆ.

ರೈತರು ಕುಂದು–ಕೊರತೆಗಳನ್ನು ಸಬ್‌ ಡಿವಿಷನಲ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗಳಲ್ಲಿ ಸಲ್ಲಿಸಲು ಹೊಸ ಕಾಯ್ದೆಯಲ್ಲಿ ಅನುಕೂಲವಿದೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮುಂದುವರಿಯಲಿದೆ, ಆ ಬಗ್ಗೆ ರೈತರಿಗೆ ಭರವಸೆ ನೀಡುತ್ತೇವೆ ಎಂದಿದ್ದಾರೆ.

ಮಂಡಿಯ ಹೊರ ಭಾಗದಲ್ಲಿ ವಹಿವಾಟು ನಡೆಯುವ ಬಗ್ಗೆ ಚರ್ಚೆಯಲ್ಲಿ ಪ್ರಶ್ನೆಗಳು ಎದ್ದವು, 'ಪ್ಯಾನ್‌ ಕಾರ್ಡ್‌ ಆಧಾರದ ಮೇಲೆ ಮಂಡಿಯ ಹೊರಗಡೆ ವಹಿವಾಟು ನಡೆಯುತ್ತದೆ. ವಹಿವಾಟು ನಡೆಸುವವರು ನೋಂದಾಯಿಸಿಕೊಂಡಿರಬೇಕಾಗುತ್ತದೆ, ಆ ಬಗ್ಗೆ ನಾವು ಖಚಿತಪಡಿಸಿಕೊಳ್ಳುತ್ತೇವೆ' ಎಂದು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT