ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮೌನದಿಂದ ಪಕ್ಕದ ಚೀನಾದ ಗಡಿ ಆಕ್ರಮಣ ಉತ್ಸಾಹ ಹೆಚ್ಚುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಪ್ಯಾಂಗಾಂಗ್ ಸರೋವರದ ಬಳಿ ಭಾರತದ ಜಾಗದಲ್ಲಿ ಚೀನಾ ಸೇತುವೆ ನಿರ್ಮಿಸುತ್ತಿದೆ ಎನ್ನಲಾದ ಉಪಗ್ರಹ ಆಧಾರಿತ ವಿಡಿಯೊ ಒಂದನ್ನುಬುಧವಾರ ಟ್ವಿಟರ್ನಲ್ಲಿ ಹಂಚಿಕೊಂಡು ಅವರು ಈ ಆರೋಪ ಮಾಡಿದ್ದಾರೆ.

‘ಚೀನಾ ನಮ್ಮ ದೇಶದಲ್ಲಿ ರಾಜತಾಂತ್ರಿಕ ಸೇತುವೆಯನ್ನು ನಿರ್ಮಿಸುತ್ತಿದೆ.ಪ್ರಧಾನಿಯವರ ಮೌನದಿಂದಾಗಿ ಪಿಎಲ್ಎ (ಚೀನಾ ಸೇನೆ) ಉತ್ಸಾಹ ಹೆಚ್ಚುತ್ತಿದೆ.ಈ ಸೇತುವೆಯನ್ನು ಉದ್ಘಾಟನೆ ಮಾಡಲು ನಮ್ಮ ಪ್ರಧಾನಿ ಹೋದರೂ ಹೋಗಬಹುದು ಎಂಬ ಭಯವಿದೆ’ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ನಟಿ ರೈಮಾ ಶಿಮು ಮೃತದೇಹ ಪತ್ತೆ: ಪತಿ, ಕಾರು ಚಾಲಕನ ಬಂಧನ

ಲಡಾಖ್ಬಳಿಯ ಪ್ಯಾಂಗಾಂಗ್ ಸರೋವರದ ದಕ್ಷಿಣ ತೀರದಿಂದ ಉತ್ತರ ತೀರಕ್ಕೆ ಸೇತುವೆ ನಿರ್ಮಾಣವಾಗುತ್ತಿರುವ ಹಾಗೂ ಅಲ್ಲಿ ಬೃಹತ್ ಕ್ರೇನ್ಗಳು ಬೀಡು ಬಿಟ್ಟಿರುವ ದೃಶ್ಯಗಳನ್ನು ವಿಡಿಯೊದಲ್ಲಿ ನೋಡಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.