ಸೋಮವಾರ, ಡಿಸೆಂಬರ್ 5, 2022
23 °C

ಕಾಂಗ್ರೆಸ್‌ನಲ್ಲಿ ಜಿ–23 ಎಂಬುದಿಲ್ಲ, ಎಲ್ಲವೂ ಮಾಧ್ಯಮ ಸೃಷ್ಟಿ: ಶಶಿ ತರೂರ್‌ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ‘ಕಾಂಗ್ರೆಸ್‌ನಲ್ಲಿ ಜಿ-23 ಎಂಬ ಗುಂಪು ಇಲ್ಲ. ಇದು ಮಾಧ್ಯಮಗಳ ಕಲ್ಪನೆಯಷ್ಟೇ’ ಎಂದು ಎಐಸಿಸಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಶಶಿ ತರೂರ್ ಸೋಮವಾರ ಹೇಳಿದ್ದಾರೆ. 

ಹೈದರಾಬಾದ್‌ನಲ್ಲಿ ಚುನಾವಣಾ ಪ್ರಚಾರ ಕೈಗೊಂಡಿರುವ ತರೂರ್‌ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.  

‘ಒಂದೆರಡು ಹಿರಿಯ ನಾಯಕರು ಪತ್ರ ಬರೆದಿದ್ದರು. ಹೆಚ್ಚಿನವರಿಂದ ಅವರು  ಬೆಂಬಲ ಕೇಳಿದ್ದರು. 2020 ರಲ್ಲಿ ಕೋವಿಡ್‌ ಕಾರಣದಿಂದ ಲಾಕ್‌ಡೌನ್ ಆನ್ ಆಗಿತ್ತು. ಆ ಸಮಯದಲ್ಲಿ ಪತ್ರಕ್ಕೆ ಸಹಿ ಹಾಕಲು ದೆಹಲಿಯಲ್ಲಿ ಕೇವಲ 23 ನಾಯಕರು ಮಾತ್ರವೇ ಇದ್ದರು’ ಎಂದು ಅವರು ಹೇಳಿದ್ದಾರೆ. 

ಪಕ್ಷದಲ್ಲಿ ವ್ಯಾಪಕ ಸುಧಾರಣೆ  ಬಯಸಿದ್ದ ಜಿ -23 ನಾಯಕರು ಸೋನಿಯಾ ಗಾಂಧಿ ಅವರಿಗೆ 2020ರ ಆಗಸ್ಟ್‌ನಲ್ಲಿ ಪತ್ರ ಬರೆದಿದ್ದರು. ಈ ಗುಂಪಿನಲ್ಲಿ ಶಶಿ ತರೂರ್‌ ಅವರೂ ಇದ್ದರು. 

ಇದೇ ವಿಚಾರವಾಗಿ ಭಾನುವಾರ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ, ‘ಈಗ ಜಿ 23 ಬಣವಿಲ್ಲ. ಎಲ್ಲಾ ನಾಯಕರು (ಜಿ 23) ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ಒಟ್ಟಾಗಿ ಕೆಲಸ ಮಾಡಲು ಬಯಸುತ್ತಾರೆ. ಇದೇ ಕಾರಣಕ್ಕೆ ನನ್ನನ್ನು ಬೆಂಬಲಿಸುತ್ತಿದ್ದಾರೆ’ ಎಂದು ಹೇಳಿದ್ದರು. 

ಇವುಗಳನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು