ಮಂಗಳವಾರ, ಮೇ 18, 2021
30 °C

ಮಾರ್ಚ್‌ 31ಕ್ಕೆ ಭಾರತ ತಲುಪಲಿವೆ ಇನ್ನೂ 3 ರಫೇಲ್ ಯುದ್ಧ ವಿಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಫ್ರಾನ್ಸ್‌ ಜತೆ ಮಾಡಿಕೊಂಡಿರುವ ಯುದ್ಧ ವಿಮಾನ ಖರೀದಿ ಒಪ್ಪಂದದ ಅನ್ವಯ ಮೂರು ರಫೇಲ್ ಜೆಟ್‌ಗಳು ಮಾರ್ಚ್ 31ರಂದು(ಬುಧವಾರ) ಭಾರತ ತಲುಪಲಿವೆ.

ಈ ಯುದ್ಧವಿಮಾನಗಳು ಬಳಿಕ ಭಾರತೀಯ ವಾಯುಪಡೆಯ ಅಂಬಾಲ ವಾಯುನೆಲೆಯಲ್ಲಿರುವ ‘ಗೋಲ್ಡನ್ ಏರೋಸ್‌ ಸ್ಕ್ವಾಡ್ರನ್’ ಸೇರಿಕೊಳ್ಳಲಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಓದಿ: 

‘ಡಸಾಲ್ಟ್ ಏವಿಯೇಷನ್’ ಮೂಲಗಳ ಪ್ರಕಾರ, ಮೂರು ರಫೇಲ್ ಜೆಟ್‌ಗಳು ಫ್ರಾನ್ಸ್‌ನ ಬೋರ್ಡಾವ್‌ ವಾಯುನೆಲೆಯಿಂದ ಬುಧವಾರ ಬೆಳಿಗ್ಗೆ 7 ಗಂಟೆಗೆ ಟೇಕಾಫ್ ಆಗಲಿವೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ವಾಯುಪಡೆಯ ‘ಏರ್‌ಬಸ್ 330 ಮಲ್ಟಿ ರೋಲ್ ಟ್ರಾನ್ಸ್‌ಪೋರ್ಟ್ ಟ್ಯಾಂಕರ್‌’ಗಳು ಮಾರ್ಗ ಮಧ್ಯದಲ್ಲೇ ‘ಗಲ್ಫ್‌ ಆಫ್ ಒಮಾನ್’ ಪ್ರದೇಶದಲ್ಲಿ ರಫೇಲ್‌ ಜೆಟ್‌ಗಳಿಗೆ ಇಂಧನ ಪೂರೈಸಲಿವೆ. ಅದೇ ದಿನ ರಾತ್ರಿ 7 ಗಂಟೆಗೆ ಜೆಟ್‌ಗಳು ಗುಜರಾತ್‌ ತಲುಪುವ ನಿರೀಕ್ಷೆ ಇದೆ ಎಂದು ವರದಿ ಉಲ್ಲೇಖಿಸಿದೆ.

ಮುಂದಿನ ಹಂತದಲ್ಲಿ 9 ರಫೇಲ್‌ ಯುದ್ಧ ವಿಮಾನಗಳು ಭಾರತ ತಲುಪಲಿವೆ ಎನ್ನಲಾಗಿದೆ.

ಓದಿ: 

ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಭಾರತ ಸಹಿ ಹಾಕಿದ ನಾಲ್ಕು ವರ್ಷಗಳ ಬಳಿಕ, ಅಂದರೆ 2020ರ ಜುಲೈನಲ್ಲಿ ಮೊದಲ ಹಂತದ ಐದು ರಫೇಲ್‌ ಜೆಟ್‌ಗಳು ಭಾರತಕ್ಕೆ ಬಂದಿದ್ದವು. ಅವುಗಳನ್ನು ಇಂಧನ ತುಂಬಿಸಿಕೊಳ್ಳುವುದಕ್ಕಾಗಿ ಯುಎಇಯಲ್ಲಿರುವ ಫ್ರಾನ್ಸ್‌ನ ವಾಯುನೆಲೆಯಲ್ಲಿ ನಿಲುಗಡೆ ಮಾಡಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು