ನವದೆಹಲಿ: ಮಹಿಳೆಯೊಬ್ಬರು ದೇಶದ ಮುಖ್ಯ ನ್ಯಾಯಮೂರ್ತಿಯಾಗುವ ಸಮಯ ಬಂದಿದೆ. ಆದರೆ ಮನೆ ಮತ್ತು ಪೋಷಕ ಜವಾಬ್ದಾರಿಗಳನ್ನು ಉಲ್ಲೇಖಿಸಿ ಮಹಿಳಾ ವಕೀಲರು ನ್ಯಾಯಾಧೀಶರ ಹುದ್ದೆಯನ್ನು ನಿರಾಕರಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು ನ್ಯಾಯಮೂರ್ತಿಗಳ ಹುದ್ದೆಗೆ ಮಹಿಳಾ ವಕೀಲರನ್ನು ಆಯ್ಕೆ ಮಾಡಲು ಹೈಕೋರ್ಟ್ ಕೊಲಿಜಿಯಂ ಎದುರಿಸುತ್ತಿರುವ ಸಮಸ್ಯೆಗಳನ್ನು ಉಲ್ಲೇಖಿಸಿದೆ.

‘ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಪೀಠಕ್ಕೆ ಬರಲು ವಕೀಲೆಯರನ್ನು ಕೇಳಿದಾಗ ಅವರು ಮನೆಯ ಜವಾಬ್ದಾರಿ ಅಥವಾ ಅವರ ಮಕ್ಕಳು 11 ಅಥವಾ 12ನೇ ತರಗತಿಯಲ್ಲಿ ಓದುತ್ತಿದ್ದಾರೆ ಎನ್ನುವ ಕಾರಣ ನೀಡಿ ನ್ಯಾಯಪೀಠ ಅಲಂಕರಿಸಲು ನಿರಾಕರಿಸುತ್ತಾರೆ. ಇದನ್ನು ಅವರು ನನ್ನ ಗಮನಕ್ಕೂ ತಂದಿದ್ದಾರೆ’ ಎಂದು ಮುಖ್ಯನ್ಯಾಯಮೂರ್ತಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.