ಸೋಮವಾರ, ಜುಲೈ 26, 2021
21 °C

ಹೊಸ ಅವತಾರದಲ್ಲಿ ಟಿಎಂಸಿ ಮುಖವಾಣಿ 'ಜಾಗೋ ಬಾಂಗ್ಲಾ'

ಪಿಟಿಐ Updated:

ಅಕ್ಷರ ಗಾತ್ರ : | |

PTI

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಮೂರನೇ ಬಾರಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ, ತನ್ನ ಮುಖವಾಣಿ 'ಜಾಗೋ ಬಾಂಗ್ಲಾ' ವಾರಪತ್ರಿಕೆಯನ್ನು ದಿನಪತ್ರಿಕೆಯಾಗಿ ಹೊರಡಿಸಲು ನಿರ್ಧರಿಸಿದೆ.

ಜುಲೈ 21ರಿಂದ 'ಜಾಗೋ ಬಾಂಗ್ಲಾ' ದಿನಪತ್ರಿಕೆಯ ರೂಪದಲ್ಲಿ ಹೊರಬರಲಿದೆ ಎಂದು ಟಿಎಂಸಿಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿ ತಿಳಿಸಿದ್ದಾರೆ.

ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಟ್ಯಾಗ್ ಮಾಡಿರುವ ಟ್ವಿಟರ್‌ ಪೋಸ್ಟ್‌ನಲ್ಲಿ 'ಜಾಗೋ ಬಾಂಗ್ಲಾ ಅರಂಭದ ದಿನಗಳಿಂದಲೂ ಬಂಗಾಳದ ಜನರ ಪ್ರತಿಧ್ವನಿಯಾಗಿದೆ. ಮಮತಾ ಬ್ಯಾನರ್ಜಿ ಅವರ ದೂರದೃಷ್ಟಿಯನ್ನು ಜನರ ಹೃದಯಕ್ಕೆ ತಟ್ಟುವಂತೆ ಮಾಡಿದೆ ಎಂದು ಅಭಿಷೇಕ್‌ ಹೇಳಿದ್ದಾರೆ.

ಜುಲೈ 21ರಂದು ಹುತಾತ್ಮರ ದಿನ. ಅದೇ ದಿನ ಜಾಗೋ ಬಾಂಗ್ಲಾ ಹೊಸ ರೂಪದಲ್ಲಿ ಬರುತ್ತಿದೆ. 1993ರಲ್ಲಿ ಅಧಿಕಾರದಲ್ಲಿದ್ದ ಎಡ ಪಕ್ಷಗಳ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಜುಲೈ 21ರಂದು ಪೊಲೀಸರ ಗುಂಡಿಗೆ 13 ಮಂದಿ ಮೃತರಾಗಿದ್ದರು. ಆಗ ಮಮತಾ ಕಾಂಗ್ರೆಸ್‌ ಪಕ್ಷದಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು