ಮಂಗಳವಾರ, ಮೇ 24, 2022
27 °C

ಪತ್ನಿ ಸಂಬಂಧಿ ಮಹಿಳೆಯಿಂದ ಬಹಿರಂಗವಾಗಿ ಚುಂಬನ ಪಡೆದ ಪೊಲೀಸ್‌ ಪೇದೆ ಅಮಾನತು

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಕೊಯಮತ್ತೂರು: ಪಾರ್ಕ್‌ನಲ್ಲಿ ಮಹಿಳೆಯೊಬ್ಬರಿಂದ ಚುಂಬನ ಪಡೆದ ಕೊಯಮತ್ತೂರು ನಗರದ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ಕಾನ್‌ಸ್ಟೆಬಲ್‌ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.

ವಿ. ಬಾಲಾಜಿ ಅಮಾನತುಗೊಂಡ ಪೇದೆ. ಮೂಲತಃ ಕಡಲೂರಿನವರಾದ ಬಾಲಾಜಿ ಕೊಯಮತ್ತೂರು ನಗರ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯಲ್ಲಿ ಗ್ರೇಡ್‌–1 ಪೊಲೀಸ್‌ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಾಲಾಜಿ 2017ರಲ್ಲಿ ಕರ್ತವ್ಯಕ್ಕೆ ಸೇರಿದ್ದರು.

ಮಹಿಳೆ ಚುಂಬಿಸುವಾಗ ಬಾಲಾಜಿ ಪೊಲೀಸ್‌ ಸಮವಸ್ತ್ರದಲ್ಲಿದ್ದರು. ಪೇದೆ ಮತ್ತು ಮಹಿಳೆಯ ಆತ್ಮೀಯ ಕ್ಷಣಗಳನ್ನು ಪಾರ್ಕ್‌ನಲ್ಲಿದ್ದ ಜನ ವಿಡಿಯೊ ಮಾಡಿ ಪೊಲೀಸ್‌ ಇಲಾಖೆಗೆ ನೀಡಿದ್ದಾರೆ. ಅಲ್ಲದೆ, ಅದನ್ನು ಸಾಮಾಜಿಕ ಮಾಧ್ಯಮಗಳಲ್ಲೂ ವೈರಲ್‌ ಮಾಡಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಅವರನ್ನು ಕೊಯಮತ್ತೂರು ಸಹಾಯಕ ಪೊಲೀಸ್‌ ಕಮಿಷನರ್ ಮುರಳೀಧರನ್ ಅಮಾನತು ಮಾಡಿದ್ದಾರೆ.

ಬಾಲಾಜಿ ಅವರು ಬೇರೆ ಧರ್ಮದ ಯುವತಿಯೊಬ್ಬರನ್ನು ವಿವಾಹವಾಗಿದ್ದು, ಪತ್ನಿಯೊಂದಿಗೆ ಕೊಯಮತ್ತೂರಿನ ಪೊಲೀಸ್ ವಸತಿ ಗೃಹದಲ್ಲಿ ವಾಸವಾಗಿದ್ದಾರೆ. ಪತ್ನಿಯ ಸಂಬಂಧಿ ಮಹಿಳೆಯೊಬ್ಬರೊಂದಿಗೆ ಬಾಲಾಜಿಗೆ ಸ್ನೇಹವಾಗಿದೆ. ಆಕೆಯನ್ನು ಪಾರ್ಕ್‌ಗೆ ಕರೆದೊಯ್ದಿದ್ದ ವೇಳೆ ಈ ರೀತಿ ಆಗಿದೆ ಎಂದು ಪೊಲೀಸ್‌ ಇಲಾಖೆಯ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು