ಭಾನುವಾರ, ನವೆಂಬರ್ 28, 2021
19 °C

ದೇಶದ ಭದ್ರತೆಯ ಸವಾಲು: ಸೇನಾ ಕಮಾಂಡರ್‌ಗಳ ಚರ್ಚೆ

ಪಿಟಿಐ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ನವದೆಹಲಿ: ಸೋಮವಾರದಿಂದ ಇಲ್ಲಿ ಆರಂಭವಾಗಲಿರುವ ನಾಲ್ಕು ದಿನಗಳ ಸಮಾವೇಶದಲ್ಲಿ ಸೇನೆಯ ಉನ್ನತ ಕಮಾಂಡರ್‌ಗಳು ದೇಶದ ಭದ್ರತೆಯ ಸವಾಲುಗಳು ಹಾಗೂ ಪೂರ್ವ ಲಡಾಖ್‌ ಸೇರಿದಂತೆ ಭಾರತ–ಚೀನಾ ನಡುವಿನ ವಾಸ್ತವ ನಿಯಂತ್ರಣ ರೇಖೆಯ(ಎಲ್‌ಎಸಿ) ಸೂಕ್ಷ ಪ್ರದೇಶಗಳ ಸ್ಥಿತಿಗತಿಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ನಾಗರಿಕರ ಹತ್ಯೆ ಹಾಗೂ ಅಲ್ಲಿನ ಭದ್ರತಾ ಸನ್ನಿವೇಶಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದೂ ತಿಳಿಸಿವೆ.

ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಮತ್ತು ಕಮಾಂಡರ್‌ಗಳು ಪೂರ್ವ ಲಡಾಖ್‌ನ ಉದ್ವಿಗ್ನ ಸ್ಥಿತಿಯ ಕುರಿತು ಹಾಗೂ ಅಫ್ಗಾನಿಸ್ತಾನದ ತಾಲಿಬಾನ್‌ ಆಡಳಿತವು ದೇಶದ ಭದ್ರತೆ ಮೇಲೆ ಬೀರಬಹುದಾದ ಸಂಭವನೀಯ ಪರಿಣಾಮಗಳ ಕುರಿತೂ ಮಾತುಕತೆ ನಡೆಸುವರು ಎಂದೂ ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು