ಬುಧವಾರ, ಅಕ್ಟೋಬರ್ 28, 2020
23 °C

ಮಳೆ ಪ್ರಮಾಣ ಇಳಿಕೆ: ಯಥಾಸ್ಥಿತಿಗೆ ಮುಂಬೈ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಭಾರಿ ಮಳೆಗೆ ತತ್ತರಿಸಿದ್ದ ವಾಣಿಜ್ಯ ನಗರಿ ಮುಂಬೈನ ಜನಜೀವನ ಗುರುವಾರ ಯಥಾಸ್ಥಿತಿಗೆ ಮರಳಿದ್ದು, ಸಾರಿಗೆ ಸೇವೆ ಪುನರಾರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮುಂಬೈನಲ್ಲಿ ಬುಧವಾರ 24 ತಾಸಿನಲ್ಲಿ 256 ಮಿ.ಮೀ. ಮಳೆ ಸುರಿದಿತ್ತು. ಇದರಿಂದಾಗಿ ಹಲವೆಡೆ ನೆರೆ ಪರಿಸ್ಥಿತಿ ಉಂಟಾಗಿತ್ತು. ಹಲವೆಡೆ ಹಳಿಗಳು ಮುಳುಗಡೆಯಾದ ಕಾರಣ, ಉಪನಗರ ರೈಲು ಸೇವೆಯನ್ನು ಕೇಂದ್ರೀಯ ರೈಲ್ವೆ ಹಾಗೂ ಪಶ್ಚಿಮ ರೈಲ್ವೆಯು ಬುಧವಾರ ಸ್ಥಗಿತಗೊಳಿಸಿತ್ತು.

ಹಲವು ರಸ್ತೆಗಳಲ್ಲಿ ನೀರು ತುಂಬಿದ್ದ ಕಾರಣ ಬಸ್‌ ಸೇವೆಯೂ ಸ್ಥಗಿತವಾಗಿತ್ತು. ಗುರುವಾರ ಮಳೆ ಪ್ರಮಾಣ ಇಳಿಕೆಯಾಗಿದ್ದು, ಮುಂಬೈ ಉಪನಗರದಲ್ಲಿ ಹಾಗೂ ನವಿಮುಂಬೈನಲ್ಲಿ 100 ಮಿ.ಮೀ. ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ಉಪನಗರ ರೈಲು ಸೇವೆಯೂ ಪುನರಾರಂಭಗೊಂಡಿದ್ದು, ಅಗತ್ಯ ಸೇವೆಗಳ ಸಿಬ್ಬಂದಿಗಾಗಿ ವಿಶೇಷ ಉಪನಗರ ರೈಲು ಸೇವೆಯನ್ನೂ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕೇಂದ್ರೀಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಶಿವಾಜಿ ಸುತಾರ್‌ ತಿಳಿಸಿದ್ದಾರೆ. ಬಸ್‌ ಸೇವೆಯೂ ಯಥಾಸ್ಥಿತಿಗೆ ಮರಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು