ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲ ವಾರಗಳಲ್ಲಿ ‘ಸ್ಪುಟ್ನಿಕ್–ವಿ’ ಕೋವಿಡ್ ಲಸಿಕೆಯ ಪ್ರಾಯೋಗಿಕ ಪರೀಕ್ಷೆ

Last Updated 22 ಸೆಪ್ಟೆಂಬರ್ 2020, 13:18 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವದ ಮೊದಲ ನೋಂದಾಯಿತ ಕೋವಿಡ್ ಲಸಿಕೆ ‘ಸ್ಪುಟ್ನಿಕ್–ವಿ’ ಅನ್ನು ಮುಂದಿನ ಕೆಲ ವಾರಗಳಲ್ಲಿ
ಭಾರತದಲ್ಲಿ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ರೆಡ್ಡಿ ಲ್ಯಾಬ್‌ ಮಂಗಳವಾರ ತಿಳಿಸಿದೆ.

ಭಾರತದಲ್ಲಿ ‘ಸ್ಪುಟ್ನಿಕ್–ವಿ’ ಕೋವಿಡ್‌ ಲಸಿಕೆಯನ್ನು ಮಾರಾಟ ಮಾಡಲು ದೇಶದ ಪ್ರಮುಖ ಔಷಧ ತಯಾರಿಕಾ ಕಂಪನಿ ಹೈದರಾಬಾದ್‌ನ ಡಾ. ರೆಡ್ಡೀಸ್ ಲ್ಯಾಬೊರೇಟರಿ ಜತೆ ರಷ್ಯಾ ಒಪ್ಪಂದ ಮಾಡಿಕೊಂಡಿದೆ.

ದೇಶದಾದ್ಯಂತ ಆಯ್ದ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಾಯೋಗಿಕ ಪರೀಕ್ಷೆಗಾಗಿ 2000ಕ್ಕೂ ಹೆಚ್ಚು ಜನರನ್ನು ನೋಂದಾಯಿಸಿಕೊಳ್ಳಲಾಗುವುದು ಎಂದು ರೆಡ್ಡಿ ಲ್ಯಾಬ್‌ನ ಸಿಇಒ ದೀಪಕ್‌ ಸಪೆರಾ ತಿಳಿಸಿದ್ದಾರೆ.

ಭಾರತದಲ್ಲಿಭಾರತದಲ್ಲಿ ಲಸಿಕೆಯ ಮೂರು ಹಂತದ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ. ಪ್ರಾಯೋಗಿಕ ಪರೀಕ್ಷೆಗೆ ಭಾರತದ ಔಷಧ ನಿಯಂತ್ರಣ ಪ್ರಾಧಿಕಾರದಿಂದ ಅನುಮತಿ ದೊರೆತಿದ್ದು ಇನ್ನು ಕೆಲ ವಾರಗಳಲ್ಲಿ ಕ್ಲಿನಿಕಲ್‌ ಪರೀಕ್ಷೆ ನಡೆಯಲಿದೆ. ಈಗಾಗಲೇ ರಷ್ಯಾದಲ್ಲಿ ಎರಡು ಹಂತಗಳ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗಿದ್ದು ಬಳಕೆ ಅಲ್ಲಿನ ಸರ್ಕಾರ ಅನುಮತಿ ನೀಡಿದೆ.

ಒಪ್ಪಂದದ ಪ್ರಕಾರ, ರೆಡ್ಡಿ ಲ್ಯಾಬ್‌ಗೆ 10 ಕೋಟಿ ಡೋಸ್‌‌ಗಳು ರಷ್ಯಾದಿಂದ ರವಾನೆಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT