ಶುಕ್ರವಾರ, ಮಾರ್ಚ್ 24, 2023
22 °C

ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ 7 ವಾಹನಗಳ ಮೇಲೆ ಹರಿದ ಟ್ರಕ್‌

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಪಿಟಿಐ ಫೋಟೊ

ಪುಣೆ: ವೇಗದಲ್ಲಿ ಚಲಿಸುತ್ತಿದ್ದ ಟ್ರಕ್‌ ನಿಯಂತ್ರಣ ತಪ್ಪಿ 7 ವಾಹನಗಳಿಗೆ ಗುದ್ದಿ, ರಸ್ತೆಗೆ ಅಡ್ಡಲಾಗಿ ನಿಂತ ಘಟನೆ ನಸುಕಿನ ಜಾವದಲ್ಲಿ ನವಾಲೆ ಬ್ರಿಡ್ಜ್‌ನ ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ ಸಂಭವಿಸಿದೆ. ಅಪಘಾತದಲ್ಲಿ ಕೆಲವರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈ-ಬೆಂಗಳೂರು ಬೈಪಾಸ್‌ ರಸ್ತೆಯಲ್ಲಿ ಕಟ್ರಾಜ್‌ ಕಡೆಯಿಂದ ಟ್ರಕ್‌ ಆಗಮಿಸುತ್ತಿತ್ತು. ನವಾಲೆ ಬ್ರಿಡ್ಜ್‌ ಬಳಿ 4 ಕಾರುಗಳಿಗೆ ಮತ್ತು 3 ಆಟೋ ರಿಕ್ಷಾಗಳಿಗೆ ಡಿಕ್ಕಿ ಹೊಡೆದಿದೆ. ಪ್ರಕರಣ ಸಿನ್ನಾಗಢ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಗಾಯ ಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟ್ರಕ್‌ ಗುದ್ದಿದ ರಭಸಕ್ಕೆ 7 ವಾಹನಗಳು ಜಖಂಗೊಂಡಿವೆ. ಟ್ರಕ್‌ ರಸ್ತೆಗೆ ಅಡ್ಡಲಾಗಿ ನಿಂತ ಪರಿಣಾಮ ಕೆಲಕಾಲ ಸಂಚಾರಕ್ಕೆ ತೊಂದರೆ ಉಂಟಾಗಿತ್ತು ಎಂದು 'ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು