ಶನಿವಾರ, ನವೆಂಬರ್ 28, 2020
22 °C
ಅಮೆರಿಕನ್ನರಿಗೆ ದೊಡ್ಡ ಮೋಸವಾಗಿದೆ: ಟ್ರಂಪ್‌

ಚುನಾವಣೆ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಹೋರಾಡುವೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ‘ಅಮೆರಿಕದ ಜನರನ್ನು ವಂಚಿಸಲಾಗುತ್ತಿದೆ‘ ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಟ್ರಂಪ್‌, ‘ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ಗೆ ಹೋಗುತ್ತೇನೆ, ಅಲ್ಲೇ ಹೋರಾಡುತ್ತೇನೆ‘ ಎಂದು ಹೇಳಿದ್ದಾರೆ.

ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್ ಅವರು, ಯಾವುದೇ ಘಟನೆಗಳನ್ನು ಉಲ್ಲೇಖಿಸದೇ ಈ ಹೇಳಿಕೆ ನೀಡಿದ್ದಾರೆ. ‌‌ ‘ನಾವು ಈಗಾಗಲೇ ಚುನಾವಣೆ ಗೆದ್ದಿದ್ದೇವೆ. ಕೋಟ್ಯಂತರ ಜನರು ನನಗೆ ಮತ ಹಾಕಿದ್ದಾರೆ‘ ಎಂದು ಹೇಳಿಕೊಂಡಿದ್ದಾರೆ.

’ನಾವು ಎಲ್ಲವುದನ್ನೂ ಗೆದ್ದಿದ್ದಾಗಿದೆ. ಹೀಗಾಗಿ  ಬಹುದೊಡ್ಡ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದ್ದೆವು.  ಆದರೆ ದಿಢೀರನೆ ಎಲ್ಲವನ್ನೂ ನಿಲ್ಲಿಸಬೇಕಾಯಿತು‘ ಎಂದು ಹೇಳಿದರು.

‘ಅಮೆರಿಕದ ಜನರನ್ನು ವಂಚಿಸಲಾಗುತ್ತಿದೆ. ಇದೊಂದು ದೊಡ್ಡ ವಂಚನೆ. ಇದರಿಂದ ನಮ್ಮ ಜನಕ್ಕೆ ಮುಜುಗರ ಉಂಟಾಗುತ್ತಿದೆ‘ ಎಂದು ಹೇಳಿದ ಟ್ರಂಪ್‌, ತಮ್ಮ ಹೇಳಿಕೆಗಳಿಗೆ ಸೂಕ್ತವಾದ ಕಾರಣ ಮತ್ತು ಘಟನೆಗಳನ್ನು ತಿಳಿಸಲಿಲ್ಲ.

‘ಎಲ್ಲ ರಾಜ್ಯಗಳಲ್ಲಿ ಮತದಾನದ ಕೆಲಸ ಮುಗಿದ ನಂತರ, ನಾನು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇನೆ. ಅಲ್ಲಿ ಚುನಾವಣೆ ಕುರಿತು ಹೋರಾಟ ಮಾಡುತ್ತೇನೆ‘ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು