ಶನಿವಾರ, ಸೆಪ್ಟೆಂಬರ್ 25, 2021
29 °C
ವರದಿ ಪರಿಶೀಲಿಸುತ್ತಿರುವ ಭಾರತೀಯ ಔಷಧ ನಿಯಂತ್ರಕರು

ಸದ್ಯದಲ್ಲೇ ಮಕ್ಕಳಿಗೆ ಕೋವಿಡ್‌ ಲಸಿಕೆ ಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮಕ್ಕಳಿಗಾಗಿ, ದೇಶೀಯ ವಾಗಿ ಅಭಿವೃದ್ಧಿಪಡಿಸಲಾಗಿರುವ ಕೋವಿಡ್‌–19ನ ಎರಡು ಲಸಿಕೆಗಳು ಶೀಘ್ರದಲ್ಲೇ ಲಸಿಕಾ ಅಭಿಯಾನಕ್ಕೆ ಲಭ್ಯವಾಗಲಿವೆ.

12ರಿಂದ 18 ವರ್ಷ ವಯೋ ಮಾನದ 13ರಿಂದ 14 ಕೋಟಿ ಹದಿವಯಸ್ಸಿನವರಿಗೆ ಲಸಿಕೆ ನೀಡಬೇಕಿದೆ. ದೇಶದಾದ್ಯಂತ ವರದಿಯಾಗಿರುವ ಒಟ್ಟು 3 ಕೋಟಿ ಕೋವಿಡ್‌–19 ಪ್ರಕರಣಗಳಲ್ಲಿ,  20 ವರ್ಷಕ್ಕಿಂತ ಕಡಿಮೆ ವಯೋಮಾನದವರುಶೇ.11 ರಷ್ಟಿದ್ದಾರೆ. 12 ರಿಂದ 18 ವರ್ಷ ವಯೋಮಾನದ ವರಿಗೆ ನೀಡಬೇಕಿರುವ ಲಸಿಕೆಗಳ ಪ್ರಾಯೋಗಿಕ ಪರೀಕ್ಷೆ ನಡೆಸಿರುವ ಔಷಧ ಸಂಸ್ಥೆ ಝೈಡಸ್‌ ಕಾಡಿಲ ನೀಡಿರುವ ವರದಿಯನ್ನು ಭಾರತೀಯ ಔಷಧ ನಿಯಂತ್ರಕ ಪರಿಶೀಲನೆ ನಡೆಸುತ್ತಿದೆ. ಭಾರತ್‌ ಬಯೋಟೆಕ್‌ ಸಂಸ್ಥೆ ಕೂಡಾ 2ರಿಂದ 8 ವಯೋಮಾನದ ವರಿಗೆ ನೀಡಬೇಕಿರುವ ಲಸಿಕೆಯ ಪ್ರಯೋಗ ನಡೆ ಸುತ್ತಿದೆ.

‘ದೇಶದಾದ್ಯಂತ ಕೊರೊನಾ ಲಸಿಕೆಗಳ ಅನುಮೋದನೆ ಮತ್ತು ಲಭ್ಯತೆಯು ಈ ಪ್ರಾಯೋಗಿಕ ಪರೀಕ್ಷೆಗಳ ದತ್ತಾಂಶಗಳನ್ನು ಅವಲಂಬಿಸಿದೆ’ ಎಂದು ಕೇಂದ್ರ ಆರೋಗ್ಯ ಸಹಾಯಕ ಸಚಿವ ಭಾರತಿ ಪವಾರ್‌ ಲೋಕಸಭೆಗೆ ತಿಳಿಸಿದ್ದಾರೆ.

ಯುರೋಪ್‌ ಔಷಧ ನಿಯಂತ್ರಣ ಮೊಡೆರ್ನಾ ಲಸಿಕೆಯನ್ನು 12–17ರ ವಯೋಮಾನದ ಮಕ್ಕಳಿಗೆ ನೀಡಲು ಅನುಮೋದನೆ ನೀಡಿದೆ. ಫೈಜರ್‌–ಬಯೋಎನ್‌ಟೆಕ್‌ ಲಸಿಕೆಯನ್ನು 12–15ರ ವಯೋಮಾನದ ಮಕ್ಕಳಿಗೆ ನೀಡಲು ಅಮೆರಿಕ ಅನುಮೋದನೆ ನೀಡಿದೆ. ಲಸಿಕೆಪೂರೈಕೆಗೆ ಸಂಬಂಧಿ ಸಿದಂತೆ ಭಾರತ ಎರಡೂ ಸಂಸ್ಥೆಗಳ ಜೊತೆ ಮಾತುಕತೆ ನಡೆಸುತ್ತಿದೆ. ಆದರೆ ಈ ಸಂಸ್ಥೆಗಳು ಹಲವು ದೇಶಗಳ ಲಸಿಕೆ ಬೇಡಿಕೆ ಪೂರೈಸುತ್ತಿರುವ ಕಾರಣ ಪ್ರಕ್ರಿಯೆ ವಿಳಂಬವಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು